Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

Bank Locker Rules: ಬ್ಯಾಂಕ್ ನಲ್ಲಿ ಗ್ರಾಹಕರಿಗಾಗಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ನಿಮ್ಮ ಹಣಕ್ಕೆ ಸುರಕ್ಷತೆ ನೀಡುವುದರ ಜೊತೆಗೆ ಇನ್ನು ಹಲವು ಸುರಕ್ಷತೆಗಳು ಸಿಗುತ್ತದೆ. ಅವುಗಳಲ್ಲಿ ಒಂದು ಬ್ಯಾಂಕ್ ಲಾಕರ್ ಯೋಜನೆ ಆಗಿದೆ. ಇದರಲ್ಲಿ ನೀವು ನಿಮ್ಮ ಆಭರಣಗಳು, ಮುಖ್ಯವಾದ ದಾಖಲೆಗಳು ಇದೆಲ್ಲವನ್ನು ಜೋಪಾನವಾಗಿ ಮತ್ತು ಸುಲಭವಾಗಿ ಇಡಬಹುದು (Bank Locker Rules).

ಬ್ಯಾಂಕ್ ಲಾಕರ್ ಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡುವುದಕ್ಕೆ ಗ್ರಾಹಕರು ಇಂತಿಷ್ಟು ಮೊತ್ತವನ್ನು ಬ್ಯಾಂಕ್ ಗೆ ಪಾವತಿ ಮಾಡಬೇಕಾಗುತ್ತದೆ. ಲಾಕರ್ ಗಾಗಿ ನೀವು ಪಾವತಿ ಮಾಡಬೇಕಾದ ಹಣ, ಲಾಕರ್ ಸೈಜ್ ಮತ್ತು ಬ್ಯಾಂಕ್ ಇರುವುದು ಎಲ್ಲಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ (Bank Locker Rules). ಹಳ್ಳಿಗಳಲ್ಲಿ ಇರುವ ಲಾಕರ್ ಗಳಿಗೆ ನೀವು ಕಡಿಮೆ ಹಣ ಕಟ್ಟಬೇಕಾಗುತ್ತದೆ. ಹಾಗೆಯೇ ನಗರಗಳಲ್ಲಿ ಲಾಕರ್ ಗಳಿಗೆ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ. ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

ಬ್ಯಾಂಕ್ ತಮ್ಮ ಗ್ರಾಹಕರಿಗೆ ಲಾಕರ್ ನೀಡಿದಾಗ, ಎರಡು ರೀತಿಯ ಕೀ ಗಳನ್ನು ಕೊಡುತ್ತದೆ. ಒಂದು ಕೀ ಗ್ರಾಹಕರಿಗೆ ಕೊಡಲಾಗುತ್ತದೆ. ಮತ್ತೊಂದು ಕೀ ಬ್ಯಾಂಕ್ ನಲ್ಲೇ ಇರುತ್ತದೆ. ನೀವು ಲಾಕರ್ ಬಳಸಬೇಕಾಗಿ ಬಂದಾಗ, ಬ್ಯಾಂಕ್ ನ ಸಿಬ್ಬಂದಿ ಬಂದು ಲಾಕರ್ ಅನ್ನು ಆಪರೇಟ್ ಮಾಡಬೇಕಾಗುತ್ತದೆ. ಅವರು ಬಂದು ಲಾಕರ್ ಗೆ ಒಂದು ಕೀ ಹಾಕಿ ಓಪನ್ ಆದ ನಂತರ (Bank Locker Rules)..

ನೀವು ಇನ್ನೊಂದು ಕೀ ಬಳಸಿ ಲಾಕರ್ ಓಪನ್ ಮಾಡಬಹುದು. ಗ್ರಾಹಕರ ಹತ್ತಿರ ಇರುವ ಲಾಕರ್ ನ ಕೀ ಒಂದು ವೇಳೆ ಕಳೆದು ಹೋದರೆ, ಏನು ಮಾಡಬೇಕು ಗೊತ್ತಾ? HDFC ಬ್ಯಾಂಕ್ ಹೇಳುವ ಪ್ರಕಾರ ಲಾಕರ್ ನ ಕೀ ಕಳೆದುಹೋದರೆ, ಗ್ರಾಹಕರು ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ v. ನಿಮ್ಮ ಬ್ಯಾಂಕ್ ಲಾಕರ್ ವಿವರಗಳನ್ನು ಅರ್ಜಿಯಲ್ಲಿ ತಿಳಿಸಿ, ಬ್ಯಾಂಕ್ ಗೆ ಮಾಹಿತಿ ನೀಡಬೇಕು. ಇದನ್ನು ಓದಿ..ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

ಬ್ಯಾಂಕ್ ಗೆ ಅರ್ಜಿ ಹಾಕುವುದರ ಜೊತೆಗೆ FIR ದಾಖಲಿಸಬೇಕಾಗುತ್ತದೆ. ಬಳಿಕ ಬ್ಯಾಂಕ್ ನಿಮ್ಮಿಂದ ಕೀಗಾಗಿ ಹಣ ಪಡೆಯುತ್ತದೆ. ಈ ರೀತಿಯಾಗಿ ನೀವು ಕಳೆದು ಹೋದ ಲಾಕರ್ ನ ಕೀ ಪಡೆಯಬಹುದು. ಬ್ಯಾಂಕ್ ಲಾಕರ್ ಬಳಸುವವರು ಈ ಎಲ್ಲಾ ನಿಯಮಗಳನ್ನು ತಿಳಿದುಕೊಂಡಿದ್ದರೆ, ನಿಮಗೆ ಒಳ್ಳೆಯದು. ಇನ್ನುಮುಂದೆ ಲಾಕರ್ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಳ್ಳಿ (Bank Locker Rules). ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Comments are closed.