BJP: ಜಾತಿ ಲೆಕ್ಕಾಚಾರ ಮಾಡಿ, ಕರ್ನಾಟಕದಲ್ಲಿ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾದ BJP ಹೈ ಕಮಾಂಡ್- ಕಾಂಗ್ರೆಸ್ ಗೆ ನಡುಕ ಆರಂಭ.

BJP: ಜಾತಿ ಲೆಕ್ಕಾಚಾರ ಮಾಡಿ, ಕರ್ನಾಟಕದಲ್ಲಿ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾದ BJP ಹೈ ಕಮಾಂಡ್- ಕಾಂಗ್ರೆಸ್ ಗೆ ನಡುಕ ಆರಂಭ.

BJP: ರಾಜ್ಯದಲ್ಲಿ ಈಗ ಬಿಜೆಪಿ (BJP) ಪಕ್ಷಕ್ಕೆ ಸಂಕಷ್ಟ ಮತ್ತು ಗೊಂದಲದ ಸಮಯ ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಈಗ ಬಿಜೆಪಿ (BJP) ವಿರೋಧ ಪಕ್ಷವಾಗಿದ್ದು, ವಿಪಕ್ಷ ನಾಯಕನ ಸ್ಥಾನಕ್ಕೆ ಇನ್ನು ಯಾರನ್ನು ಕೂಡ ಆಯ್ಕೆ ಮಾಡಿಲ್ಲ, ಹಾಗಾಗಿ ರಾಜ್ಯದಲ್ಲಿ ಬಿಜೆಪಿ (BJP) ಪಕ್ಷವನ್ನು ಸ್ಟ್ರಾಂಗ್ ಮಾಡಲು ಬಿಜೆಪಿ ಹೈಕಮ್ಯಾಂಡ್ (BJP Highcommand) ಹೊಸ ತಂತ್ರ ಮಾಡಲು ಮುಂದಾಗಿದೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಯಕ್ಷ ಎರಡು ಸ್ಥಾನಗಳನ್ನು ಈಗ ಜಾತಿಯ ಆಧಾರದ ಮೇಲೆ ಭರ್ತಿ ಮಾಡುವುದಕ್ಕೆ ಬಿಜೆಪಿ ಹೈಕಮ್ಯಾಂಡ್ ನಿರ್ಧಾರ ಮಾಡಿದೆ. ಈ ಬಗ್ಗೆ ಚರ್ಚೆಗಳು ಶುರುವಾಗಿದೆ.

ಈ ಸ್ಥಾನಗಳಿಗೆ ಯಾರು ಆಯ್ಕೆಯಾಗುತ್ತಾರೆ ಎನ್ನುವ ಕುತೂಹಲ ಇದ್ದು, ಸ್ಥಾನ ನೇಮಕಾತಿ ಬಗ್ಗೆ ಬಿಜೆಪಿ (BJP) ಈಗ ಚಿಂತನೆ ನಡೆಸಿದೆ..ಈಗ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತು ಏನೆಂದರೆ, ಒಂದು ಸ್ಥಾನವನ್ನು ಲಿಂಗಾಯತರಿಗೆ ಕೊಡಬೇಕು, ಮತ್ತೊಂದು ಸ್ಥಾನವನ್ನು ಒಕ್ಕಲಿಗರಿಗೆ ಕೊಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈ ಸ್ಥಾನಗಳಿಗೆ ಹಲವರ ಹೆಸರು ಕೇಳಿಬರುತ್ತಿದೆ. ಬಿಜೆಪಿ (BJP) ಎದುರು ಈ ಎರಡು ಸ್ಥಾನಕ್ಕೆ ಇರುವ ಆಯ್ಕೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

ಮೊದಲ ಆಯ್ಕೆ.. ಲಿಂಗಾಯಿತರಾದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿ, ಒಕ್ಕಲಿಗ ಸಮುದಾಯದ ನಾಯಕ ಆಗಿರುವ ಸಿಟಿ ರವಿ (CT Ravi) ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಎರಡನೇ ಆಯ್ಕೆ.. ಲಿಂಗಾಯಿತ ಸಮುದಾಯಕ್ಕೆ ಸೇರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿ, ಒಕ್ಕಲಿಗ ನಾಯಕ ಅಶ್ವತ್ಥ್ ನಾರಾಯಣ್ (Ashwath Narayan) ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಹುದು.

ಮೂರನೇ ಆಯ್ಕೆ .. ಹಿಂದುಳಿದ ಸಮುದಾಯದ ನಾಯಕ ಸುನೀಲ್ ಕುಮಾರ್ (Sunil Kumar) ಅವರಿಗೆ ವಿಪಕ್ಷ ನಾಯಕನ ಸ್ಥಾನ ಹಾಗೆಯೇ ವಿಜಯೇಂದ್ರ (Vijayendra) ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಮತ್ತೊಂದು ಆಯ್ಕೆ ಆಗಿದೆ. ಇಷ್ಟು ಆಯ್ಕೆಗಳು ಬಿಜೆಪಿ ಹೈಕಮ್ಯಾಂಡ್ ಮುಂದಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಹೆಸರು ಕೂಡ ಜೋರಾಗಿಯೇ ಕೇಳಿಬರುತ್ತಿದೆ. ಇದನ್ನು ಓದಿ..ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

ಆ ಹೆಸರು ಶೋಭಾ ಕರಂದ್ಲಾಜೆ (Shobha Karandlaje) ಅವರದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಇನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಮತ್ತು ಆರ್.ಅಶೋಕ್ (R Ashok) ಅವರ ಹೆಸರು ಕೂಡ ಕೇಳಿಬರುತ್ತಿದೆ. ಈ ಎರಡು ಸ್ಥಾನಕ್ಕೆ ನಾಯಕರನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಆಯ್ಕೆಯಾಗಲಿದ್ದು, ಅಧಿಕೃತವಾಗಿ ಪ್ರಕಟಣೆ ಮಾಡಲಾಗುತ್ತದೆ. ಅಚ್ಚರಿಯ ಹೆಸರೇ ಕೇಳಿಬರಬಹುದು ಎನ್ನಲಾಗಿದೆ. ಇದನ್ನು ಓದಿ..LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?

Comments are closed.