Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

Best SUV Cars: ನಮ್ಮ ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡುವುದು ಕುಟುಂಬಕ್ಕೆ. ನಮ್ಮ ಕುಟುಂಬ ಸುರಕ್ಷಿತವಾಗಿರಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಒಂದು ಕುಟುಂಬ ಜೊತೆಯಾಗಿ ಸುರಕ್ಷಿತವಾಗಿ ಪ್ರಯಾಣ ಮಾಡುವುದಕ್ಕೆ ಒಳ್ಳೆಯ SUV ಕಾರ್ (Best SUV Cars) ಗಳನ್ನು ಖರೀದಿ ಮಾಡಬೇಕು ಎನ್ನುವುದು ಜನರ ಆಸೆ ಆಗಿರುತ್ತದೆ. SUV ಗಳಲ್ಲಿ ಜಾಗವು ದೊಡ್ಡದಾಗಿದ್ದು, ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಇರುತ್ತದೆ. ಹಾಗಾಗಿ ಇದು ಎಲ್ಲರ ಫೇವರೆಟ್ ಆಗಿದೆ. ಒಂದು ಕುಟುಂಬಕ್ಕೆ ಸೂಕ್ತ ಎನ್ನಿಸುವ 20 ಲಕ್ಷದ ಒಳಗೆ ಖರೀದಿ ಮಾಡಬಹುದಾದ SUV ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಹುಂಡೈ ಕ್ರೆಟಾ (Hyundai Creta):- ಭಾರತದಲ್ಲಿ ಈಗ ಅತ್ಯುತ್ತಮವಾದ 5 ಸೀಟರ್ SV ಗಳಲ್ಲಿ ಕ್ರೆಟಾ ಅಗ್ರಸ್ಥಾನ ಪಡೆಯುತ್ತದೆ. ಈ SUV ಎಕ್ಸ್ ಶೋರೂಮ್ ವೇಳೆ ₹10.87 ಲಕ್ಷದಿಂದ ಶುರುವಾಗಿ ₹19.20ಲಕ್ಷದವರೆಗೂ ಇರುತ್ತದೆ. ಈ SUV ಮೈಲೇಜ್ 16.8kmpl ಇಂದ 21.4kmpl ವರೆಗು ಇರುತ್ತದೆ. ಇದರಲ್ಲಿ ಉತ್ತಮ ಎಕ್ಸ್ಪೀರಿಯನ್ಸ್ ಕೊಡುವ ಸನ್ ರೂಫ್, 6 ಏರ್ ಬ್ಯಾಗ್ ಗಳು, ವೈರ್ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್ ಮತ್ತು ಇನ್ನಿತರ ಫೀಚರ್ಸ್ ಹೊಂದಿದೆ. 1.5ಲೀಟರ್ NA ಪೆಟ್ರೋಲ್ ಹಾಗೂ 1.5ಲೀಟರ್ ಡೀಸೆಲ್ ಇಂಜಿನ್ ಜೊತೆಗೆ ಬರುತ್ತದೆ (Best SUV Cars). ಇದನ್ನು ಓದಿ..Second Hand Cars: ನೀವು 2nd ಹ್ಯಾಂಡ್ ಬೈಕ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಗೊತ್ತೇ? ಮಿಸ್ ಮಾಡಿದರೆ ಟೋಪಿ ಹಾಕ್ತಾರೆ.

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ (Kia Seltos Facelift) :- ಈ SUV ಇತ್ತೀಚೆಗೆ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಸೆಲ್ಟೋಸ್ ಕಾರ್ ನ ಅಪ್ಗ್ರೇಡೆಡ್ ವರ್ಷನ್ ಇದಾಗಿದೆ..ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ನ ಎಕ್ಸ್ ಶೋರೂಮ್ ಬೆಲೆ ₹10.89ಲಕ್ಷದಿಂದ ಶುರುವಾಗುತ್ತದೆ. ಫೇಸ್ ಲಿಫ್ಟ್ ನ ಟಾಪ್ ವೇರಿಯಂಟ್ HTX ಬೆಲೆ ₹20 ಲಕ್ಷ ರೂಪಾಯಿ ಆಗಿದೆ. NDAS ಲೆವೆಲ್ 2 ವಿಶೇಷತೆಗಳು, 2023ರ ವಿಹಂಗಮ ಸನ್ ರೂಫ್ ಈ ಎರಡು ಈ ಮಾಡೆಲ್ ನ ವಿಶೇಷತೆ ಆಗಿದೆ (Best SUV Cars). 16.1 kmpl ಇಂದ 17.9 kmpl ಮೈಲೇಜ್ ನೀಡುತ್ತದೆ.

MG ಹೆಕ್ಟರ್ (MG Hecter):- ಈ SUV ಸಹ ಭಾರತದ ಫ್ಯಾಮಿಲಿಗಳಿಗೆ ಸೂಕ್ತವಾದವಾಗಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹15ಲಕ್ಷದಿಂದ ಶುರುವಾಗುತ್ತದೆ. ಇದರಲ್ಲಿ ಸನ್ ರೂಫ್ ಹಾಗೂ 14 ಇಂಚ್ HD ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ (Best SUV Cars). ಹಿಲ್ ಹೋಲ್ಡ್ ಕಂಟ್ರೋಲ್, 6 ಏರ್ ಬ್ಯಾಗ್ ಮತ್ತು ಇನ್ನಿತರ ಫೀಚರ್ಸ್ ಹೊಂದಿದೆ. ಇನ್ನು MG ಹೆಕ್ಟರ್ ನ ಮೈಲೇಜ್ ಬಗ್ಗೆ ಹೇಳುವುದಾದರೆ, 17.4kmpl ಮೈಲೇಜ್ ನೀಡುತ್ತದೆ. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

ಮಾರುತಿ ಸುಜುಕಿ ಬ್ರೆಜಾ (Maruti Suzuki Brezza) :- ಫ್ಯಾಮಿಲಿಗಳಿಗೆ 5 ಸೀಟರ್ ಆಗಿರುವ ಮತ್ತೊಂದು SUV ಆಯ್ಕೆ ಮಾರುತಿ ಸುಜುಕಿ ಬ್ರೆಜಾ ಆಗಿದೆ. ಈ SUV ಬೆಲೆ 8.29ಲಕ್ಷದಿಂದ ಶುರುವಾಗಿ ₹14.14ಲಕ್ಷದವರೆಗು ಇರುತ್ತದೆ. 20.15kmpl ಮೈಲೇಜ್ ಕೊಡುತ್ತದೆ. ಮಾರುತಿ ಸುಜುಕಿ ಬ್ರೆಜಾ ನಲ್ಲಿ ಕೂಡ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ, ವೈರ್ಲೆಸ್ ಚಾರ್ಜರ್ ಹಾಗೂ ಇನ್ನಿತರ ಫೀಚರ್ಸ್ ಹೊಂದಿದೆ (Best SUV Cars)..ಭಾರತದ ಪುಟ್ಟ ಫ್ಯಾಮಿಲಿಗೆ ಬ್ರೆಜಾ ಒಳ್ಳೆಯ ಆಯ್ಕೆ ಆಗಿದೆ.

ಟಾಟಾ ಹ್ಯಾರಿಯರ್ (TATA Harrier) :- ಟಾಟಾ ಕಂಪನಿಯ ಹ್ಯಾರಿಯರ್ ಕಾರ್ ಸಹ ಜನಪ್ರಿಯತೆ ಹೊಂದಿರುವ ವಾಹನಗಳಲ್ಲಿ ಒಂದು ವಾಹನ ಆಗಿದೆ..ಈ SUV ಎಕ್ಸ್ ಶೋರೂಮ್ ಬೆಲೆ 15.20 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ. ಇದರಲ್ಲೂ ಸನ್ ರೂಫ್, ಹಿಲ್ ಕೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್, 6 ಏರ್ ಬ್ಯಾಗ್ಸ್ ಮತ್ತು ಇನ್ನಿತರ ಫೀಚರ್ಸ್ ಹೊಂದಿದೆ. 14.6kmpl ಇಂದ 16.35kmpl ಮೈಲೇಜ್ ನೀಡುತ್ತದೆ. 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಇಂಜಿನ್ ಇರಲಿದ್ದು, 167bhp ಪವರ್, 350nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. 6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ (Best SUV Cars). ಇದನ್ನು ಓದಿ..Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?

Comments are closed.