Ration Card Updates: ಇದಪ್ಪ ಅದೃಷ್ಟ ಅಂದ್ರೆ- ರೇಷನ್ ಕಾರ್ಡ್ ವಿಚಾರದಲ್ಲಿ ಮತ್ತೊಂದು ಸಿಹಿ ಸುದ್ದಿ. ಬಡವರಿಗೆ ನೆಮ್ಮದಿ ಸುದ್ದಿ. ಕೂಡಲೇ ಈ ಕೆಲಸ ಮಾಡಿ

Ration Card Updates- Karnataka Government releases new dates for Ration card update. Know the complete details here.

Ration Card Updates– ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವಂತಹ ಕೆಲವೊಂದು ಪ್ರಮುಖ ಯೋಜನೆಗಳು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ(Gruha Lakshmi Yojane) ಹಾಗೂ ಅನ್ನಭಾಗ್ಯ ಯೋಜನೆಗಳಂತಹ(Anna Bhagya Yojane) ಪ್ರಮುಖ ಯೋಜನೆಗಳಿಗೆ ರೇಷನ್ ಕಾರ್ಡ್ ಸರಿಯಾದ ರೀತಿಯಲ್ಲಿ ಇರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಇವತ್ತಿನ ಲೇಖನಿಯಲ್ಲಿ ನಾವು ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಒಂದು ಮಹತ್ವದ ವಿಚಾರವನ್ನು ಹೇಳಲು ಹೊರಟಿದ್ದೇವೆ ಬನ್ನಿ.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits


Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.

BPL Card Holders: ಕೊನೆಗೂ ಜನರಿಗೆ ನೆಮ್ಮದಿ ಸುದ್ದಿ ಕೊಟ್ಟ ಆಹಾರ ಇಲಾಖೆ- ಕೊನೆ ಕ್ಷಣದಲ್ಲಿ ಟ್ವಿಸ್ಟ್. ರೇಷನ್ ಕಾರ್ಡ್ ಇರುವವರಿಗೆ ಮಾತ್ರ.

ಇತ್ತೀಚಿನ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಸೇರ್ಪಡೆ ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ(Ration Card Updates) ಮಾಡುವುದನ್ನು ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ಸ್ವಲ್ಪ ಸಮಯಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದರು ಕೂಡ ರೇಷನ್ ಕಾರ್ಡ್ ಸರಿಯಾದ ಸ್ಥಿತಿಯಲ್ಲಿ ಇಲ್ಲದ ಕಾರಣದಿಂದಾಗಿ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಕೂಡ ಈ ಕಾರಣದಿಂದಾಗಿ ಸಾಕಷ್ಟು ಪ್ರಯೋಜನಗಳನ್ನು ಜನರು ಪಡೆಯಲು ವಿಫಲರಾಗುತ್ತಿರುವುದನ್ನು ನೋಡಿರುವ ಸರ್ಕಾರ ಈಗ ಮತ್ತೆ ಈ ಪ್ರಕ್ರಿಯೆಗೆ ಮರುಚಾಲನೆಯನ್ನು ನೀಡಿದ್ದಾರೆ.

ಹಾಗಿದ್ರೆ ರೇಷನ್ ಕಾರ್ಡ್(Ration Card Updates) ನಲ್ಲಿ ಯಾವೆಲ್ಲ ತಿದ್ದುಪಡಿಗಳನ್ನು ಮಾಡಬಹುದು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ ಬನ್ನಿ. ಹೊಸ ಸದಸ್ಯರನ್ನು ಸೇರಿಸುವುದು ಹಾಗೂ ತೆಗೆದುಹಾಕುವುದನ್ನು ಮಾಡಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೆಸರಿನ ಬದಲಾವಣೆಗಳನ್ನು ಮಾಡುವುದನ್ನು ಕೂಡ ನಡೆಸಬಹುದಾಗಿದ್ದು ಪ್ರಮುಖವಾಗಿ ಕುಟುಂಬ ಮುಖ್ಯಸ್ಥರ ಹೆಸರನ್ನು ಕೂಡ ಬದಲಾವಣೆ ಮಾಡಬಹುದಾಗಿದೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯೋಜನೆಗಳಲ್ಲಿ ಹೇಳಿರುವ ಪ್ರಕಾರ ರೇಷನ್ ಕಾರ್ಡ್ ಗಳಲ್ಲಿ ಮಹಿಳಾ ಯಜಮಾನರು ಇರುವುದು ಪ್ರಮುಖವಾಗಿದೆ.

ಸರ್ವರ್ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ತಿದ್ದುಪಡಿಗಳನ್ನು ಸರಿಪಡಿಸಲು ಅಥವಾ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಕಷ್ಟು ಕಷ್ಟ ಪಡುವಂತಾಗಿತ್ತು. ಇದನ್ನು ಪರಿಗಣಿಸಿರುವಂತಹ ರಾಜ್ಯ ಸರ್ಕಾರ ಈಗ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸೆಪ್ಟೆಂಬರ್ 1 ರಿಂದ 10 ನೇ ತಾರೀಕಿನ ವರೆಗೂ ಕೂಡ ನಾಗರಿಕರಿಗೆ ಮುಕ್ತ ಅವಕಾಶವನ್ನು ಸರ್ಕಾರ ಮಾಡಿ ಕೊಟ್ಟಿರುವುದು ನಿಜಕ್ಕೂ ಕೂಡ ಈಗ ಎಲ್ಲಾ ಕಡೆಯಿಂದಲೂ ಕೂಡ ಪ್ರಶಂಸೆಗೆ ಒಳಗಾಗಿದೆ. ಹಾಗಿದ್ರೆ ಬನ್ನಿ ಎಲ್ಲಿ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದೆಂಬುದನ್ನು ತಿಳಿಯೋಣ.

ಸಾರ್ವಜನಿಕರು ನಿಮ್ಮ ಹತ್ತಿರದ ಗ್ರಾಮ ವನ್, ಬೆಂಗಳೂರು ವನ್(Bengaluru One), ಕರ್ನಾಟಕ ವನ್ ಗಳಂತಹ ಸೇವ ಕೇಂದ್ರಗಳಲ್ಲಿ ಹೋಗಿ ನೀವು ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿಯನ್ನು ಮಾಡಬಹುದಾಗಿದೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಅಧಿಕೃತ ಸರ್ಕಾರದ ವೆಬ್ಸೈಟ್ ಗಳಲ್ಲಿ ಹೋಗಿ ಕೂಡ ಆನ್ಲೈನ್ ನಲ್ಲಿ ನೀವು ನಿಮ್ಮ ತಿದ್ದುಪಡಿಗಳನ್ನು ಮುಕ್ತವಾಗಿ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಕೂಡ ತಿಳಿದು ಬಂದಿದ್ದು ಆದಷ್ಟು ಶೀಘ್ರದಲ್ಲಿ ನೀವು 10 ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಉತ್ತಮವಾಗಿದೆ ಎಂಬುದು ತಿಳಿದು ಬಂದಿದೆ.

Comments are closed.