Part Time Jobs: ಬೇರೆ ಕೆಲಸ ಮಾಡುತ್ತಾ ಈ ಪಾರ್ಟ್ ಟೈಮ್ ಕೆಲಸ ಮಾಡಿ. 40000 ತಿಂಗಳಿಗೆ ಫಿಕ್ಸ್.

Part Time Jobs in Karnataka – Find the Job updates and Complete details below.

Part Time Jobs: ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳುವವರು ಇದ್ದಾರೆ ಆದರೆ ಸರಿಯಾದ ಕಡೆಗಳಲ್ಲಿ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಲು ಯಾರು ಕೂಡ ಮುಂದೆ ಬರುವುದಿಲ್ಲ ಆದರೆ ನಾವು ಇವತ್ತಿನ ಈ ಲೇಖನಿಯ ಮೂಲಕ ಒಂದು ಪಾರ್ಟ್ ಟೈಮ್ ಕೆಲಸದ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದ(University of agriculture science Dharwad) ಕಡೆಯಿಂದ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಆಹ್ವಾನ ನೀಡಲಾಗಿದ್ದು ನೀವು ಕೂಡ ಅರ್ಹ ಅಭ್ಯರ್ಥಿಗಳಾಗಿದ್ದರೆ ಖಂಡಿತವಾಗಿ ಈ ಕೆಲಸಕ್ಕೆ ಅಪ್ಲೈ ಮಾಡಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿಜಯನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಮನೆಯಲ್ಲಿ ಖಾಲಿ ಕುರುವ ಬದಲು, ಚಾಟ್ GPT ಬಳಸಿ ಸುಲಭವಾಗಿ ಹಣಗಳಿಸಿ. ಮಾರ್ಗಗಳು ಇಲ್ಲಿವೆ. –>Earn from Chat GPT

Part Time Jobs in Karnataka – Find the Job updates and Complete details below.

ಈ ಕೆಲಸಕ್ಕಾಗಿ ಅರ್ಜಿ ಹಾಕೋಕಿಂತ ಮುಂಚೆ ಈ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಅದರಲ್ಲೂ ವಿಶೇಷವಾಗಿ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಸಂಬಳ ಎಷ್ಟು ಇನ್ನಿತರ ವಿಚಾರಗಳ ಬಗ್ಗೆ. ಇನ್ನು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದಿರುವಂತಹ ವಿದ್ಯಾಸಂಸ್ಥೆಗಳಿಂದ ಸೈಕಾಲಜಿಯಲ್ಲಿ MA SLET/NET ಅನ್ನು ಪೂರೈಸಿರಬೇಕು ಎಂಬುದಾಗಿ ಹೇಳಲಾಗುತ್ತದೆ. ವಿಶ್ವವಿದ್ಯಾಲಯದ ನಿಯಮಗಳ ಅನುಸಾರವಾಗಿರುವಂತಹ ವಯೋಮಿತಿಗೆ ತಕ್ಕಂತೆ ನಿಮ್ಮ ವಯಸ್ಸು ಇರಬೇಕು ಎಂಬುದಾಗಿ ಕೂಡ ಹೇಳಲಾಗಿದೆ. ಇವಿಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಬೇರೆಯವರಿಗೆ UPI ಮೂಲಕ ಹಾಕಿದ ಹಣ ವಾಪಾಸ್ ಪಡೆಯೋದು ಹೇಗೆ ಗೊತ್ತೇ? ತಿಳಿದುಕೊಂಡು ಬಾರಿ ಹಣ ಉಳಿಸಿ.. –>UPI

ಇನ್ನು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಟೀಚಿಂಗ್(teaching experience) ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರುವಂತಹ ಅಭ್ಯರ್ಥಿಗಳು ಆಗಿರಬೇಕು ಎಂಬುದನ್ನು ಕೂಡ ಕಡ್ಡಾಯವಾಗಿ ಸೂಚಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಪ್ರಮುಖವಾಗಿ ಯೋಚಿಸುವುದು ಸಂಬಳ ಎಷ್ಟಿದೆ ಎನ್ನುವುದರ ಬಗ್ಗೆ. ಈ ಕೆಲಸದಲ್ಲಿ ನೀವು ಆಯ್ಕೆಯಾಗಲಿ ತಿಂಗಳಿಗೆ 40,000 ಸಂಬಳವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕೂಡ ವಿಶ್ವವಿದ್ಯಾಲಯ ಅಧಿಕೃತವಾಗಿ ಹೇಳಿಕೊಂಡಿದೆ. ಇನ್ನು ಇದರಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ವಿಜಯನಗರದಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ ಹೀಗಾಗಿ ಈ ಸ್ಥಳದಲ್ಲಿ ಕೆಲಸ ಮಾಡಲು ನೀವು ಸಿದ್ಧರಾಗಿರಬೇಕು.

ಇನ್ನು ಈ ಕೆಲಸಕ್ಕಾಗಿ ಆಯ್ಕೆ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎಂಬುದನ್ನು ನೋಡುವುದಾದರೆ ಎರಡು ರೀತಿಯಲ್ಲಿ ಆಯ್ಕೆ ಮಾಡುತ್ತಾರೆ. ಮೊದಲನೆಯದಾಗಿ ಎಕ್ಸಾಮ್ ಮೂಲಕ. ಅಂದರೆ ಲಿಖಿತ ಪರೀಕ್ಷೆಯ ಮೂಲಕ. ಅದರಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳನ್ನು ನೇರವಾಗಿ interview ಮಾಡಲಾಗುತ್ತದೆ ಹಾಗೂ ಅದರಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳು ಈ ಕೆಲಸವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇನ್ನು ಈ ಸಂದರ್ಶನ ನಡೆಯೋದು ವಿಜಯಪುರದ ಕೃಷಿ ವಿದ್ಯಾಲಯದ(University of agriculture vijayapura) ಡೀನ್ ಅವರ ಕೊಠಡಿಯಲ್ಲಿ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದು ಅಕ್ಟೋಬರ್ ಮೂರರಂದು ನೋಟಿಫಿಕೇಶನ್ ಹೊರಬಿದ್ದಿದ್ದು, ಇದೇ ಅಕ್ಟೋಬರ್ 17ರಂದು ಅರ್ಜಿ ಸಲ್ಲಿಸುವಂತಹ ಕೊನೆಯ ದಿನಾಂಕವಾಗಿದ್ದು ಆದಷ್ಟು ಶೀಘ್ರವಾಗಿ ಅರ್ಜಿಯನ್ನು ಸಲ್ಲಿಸಿ ಹಾಗೂ ಕೆಲಸವನ್ನು ಪಡೆದುಕೊಳ್ಳಿ ಅಥವಾ ನಿಮಗೆ ಬೇಡದೆ ಹೋದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಒಂದು ವೇಳೆ ಕೆಲಸದ ಅವಶ್ಯಕತೆ ಇದ್ದಲ್ಲಿ ಅವರಿಗೂ ಕೂಡ ಈ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಕೆಲಸ ಸಿಗುವುದಕ್ಕೆ ನೀವು ಕಾರಣಿಕರ್ತರಾಗಬಹುದಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಕೆಲಸ ಸಿಗುವುದಕ್ಕೆ ಕಾರಣವಾಗುವ.

Comments are closed.