KSRTC Travel Package: ದಸರಾ ಹಬ್ಬ ಪ್ರಯುಕ್ತ ಕಡಿಮೆ ಬೆಲೆಗೆ ದೇವಸ್ಥಾನಗಳ ಟ್ರಿಪ್ ಆಯೋಜನೆ- ಹಲವಾರು ದೇವಸ್ಥಾನ, ಕಡಿಮೆ ಬೆಲೆ.

Below is the Complete Details of KSRTC Travel Package for Dasara festival- Travel more places with Less money. Best Ever travel/trip package announced by KSRTC.

KSRTC Travel Package: ನಮಸ್ಕಾರ ಸ್ನೇಹಿತರೇ ಇನ್ನೇನು ನವರಾತ್ರಿ ದಸರಾ ಹಬ್ಬಗಳ(Dasara festival) ಸೀಸನ್ ಪ್ರಾರಂಭವಾಗಿದ್ದು ನಾಡಿನಲ್ಲಿ ಈ ಹಬ್ಬವನ್ನು ಆಚರಿಸಲು ಪ್ರತಿಯೊಬ್ಬರೂ ಕೂಡ ಕಾತರರಾಗಿ ಕುಳಿತಿದ್ದಾರೆ. ಕಳೆದ ಬಾರಿ KSRTC ದಸರಾ ದೇಗುಲ ದರ್ಶನ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿ ಅದರಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು ಹೀಗಾಗಿ ಈ ಬಾರಿ ಕೂಡ ಇದೇ ವಿಶೇಷ ಪ್ಯಾಕೇಜ್ ಅನ್ನು ಯಾತ್ರಾರ್ಥಿಗಳಿಗಾಗಿ ಘೋಷಿಸಲಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Below is the Complete Details of KSRTC Travel Package for Dasara festival- Travel more places with Less money. Best Ever travel/trip package announced by KSRTC.

ಈ ಬಾರಿ ದಸರಾ ದರ್ಶಿನಿಯ ಮೂಲಕ ಮಂಗಳೂರಿನ ಸುತ್ತಮುತ್ತಲು ಇರುವಂತಹ 9 ಪ್ರಮುಖ ದೇವಸ್ಥಾನಗಳನ್ನು ವೀಕ್ಷಿಸಲಾಗುತ್ತದೆ. ಅವುಗಳು ಯಾವುವು ಎಂಬುದನ್ನು ನೋಡುವುದಾದರೆ, ಕುದ್ರೋಳಿ, ಊರ್ವ ಮಾರಿಯಮ್ಮ, ಸಸಿ ಹಿತ್ಲು, ಚಿತ್ರಾಪುರ, ಮಂಗಳದೇವಿ, ಬಪ್ಪನಾಡು, ಪೊಳಲಿ ಸುಂಕದಕಟ್ಟೆ ಹಾಗೂ ಕಟೀಲು ದೇವಸ್ಥಾನ(kateel Durga parameshwari temple). ಸಾಮಾನ್ಯ ಬಸ್ ನಲ್ಲಿ 400 ರೂಪಾಯಿಗಳ ದರ ಇದ್ರೆ ವೋಲ್ವೋ ಬಸ್ ನಲ್ಲಿ 500 ರೂಪಾಯಿಗಳ ದರ ಪ್ರತಿ ವ್ಯಕ್ತಿಗೆ ಚಾರ್ಜ್ ಮಾಡಲಾಗುತ್ತದೆ. 6 ರಿಂದ 12ನೇ ವಯಸ್ಸಿನ ನಡುವೆ ಇರುವಂತಹ ಮಕ್ಕಳಿಗೆ 300 ರೂಪಾಯಿಗಳ ಟಿಕೆಟ್ ಅನ್ನು ಚಾರ್ಜ್ ಮಾಡಲಾಗುತ್ತದೆ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಇದರಲ್ಲಿ ಇರುವಂತಹ ಮತ್ತೊಂದು ಪ್ಯಾಕೇಜ್ ನಲ್ಲಿ ಐದು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತೋರಿಸಲಾಗುತ್ತದೆ ಇದಕ್ಕೆ ಪಂಚ ದುರ್ಗ ದರ್ಶನ ಪ್ಯಾಕೇಜ್ ಎಂಬುದಾಗಿ ಕರೆಯಲಾಗುತ್ತದೆ. ಇದಕ್ಕೆ ನೀವು 400 ರೂಪಾಯಿಗಳ ಬಸ್ ಟಿಕೆಟ್ ಅನ್ನು ಚಾರ್ಜ್ ನೀಡಬೇಕಾಗುತ್ತದೆ. ಇನ್ನು ಈ ಪ್ಯಾಕೇಜ್ ನಲ್ಲಿ ನೀವು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ತಲಪಾಡಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕುರು, ಬಪ್ಪನಾಡು ದೇವಸ್ಥಾನಗಳ ದರ್ಶನವನ್ನು ಮಾಡಬಹುದಾಗಿದೆ. ಮತ್ತೊಂದು ಪ್ಯಾಕೇಜ್ ನಲ್ಲಿ ಉಡುಪಿಯ ಪ್ರಮುಖ ದೇವಸ್ಥಾನಗಳಾಗಿರುವ, ಕೊಲ್ಲೂರು ಮೂಕಾಂಬಿಕೆ, ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನವನ್ನು ನೀವು ದರ್ಶನ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಪ್ರತಿ ಪ್ರಯಾಣಿಕರಿಗೆ ಕೇವಲ 500 ರೂಪಾಯಿಗಳ ಟಿಕೆಟ್ ಮಾತ್ರ ವಿಧಿಸಲಾಗುತ್ತದೆ.

ಇದರ ಜೊತೆಗೆ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವಂತಹ ಮಡಿಕೇರಿ ಪ್ಯಾಕೇಜ್ (Madikeri Package) ಕೂಡ ಕಂಡುಬರುತ್ತದೆ. ಮಡಿಕೇರಿಯಲ್ಲಿ ರಾಜ ಸೀಟ್ಸ್, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್, ಅಬ್ಬಿ ಫಾಲ್ಸ್ ಗಳಂತಹ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ತೋರಿಸಲಾಗುತ್ತದೆ. ಇನ್ನು ಈ ಪ್ಯಾಕೇಜ್ ಗಾಗಿ 500 ರೂಪಾಯಿಗಳ ಟಿಕೆಟ್ ಅನ್ನು ಚಾರ್ಜ್ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಅಕ್ಟೋಬರ್ 15ರಿಂದ 24ರ ವರೆಗೆ ಈ ದಸರಾ ಪ್ಯಾಕೇಜ್ ಅನ್ನು ನಿರ್ಧರಿಸಲಾಗಿದ್ದು ಒಂದು ವೇಳೆ ಜನರ ಬೇಡಿಕೆ ಹೆಚ್ಚಾದಲ್ಲಿ ಅಕ್ಟೋಬರ್ 30 ನೇ ತಾರೀಖಿನವರೆಗೂ ಕೂಡ ಇದನ್ನು ವಿಸ್ತರಿಸುವ ನಿರ್ಧಾರವನ್ನು KSRTC ಮಾಡಲಿದೆ (KSRTC Travel Package).

Dasara Package ಗಾಗಿ 25 ಕೆಎಸ್ಆರ್ಟಿಸಿ ಬಸ್ಸುಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಮಹಿಳೆಯರು ಪ್ರಮುಖವಾಗಿ ಈ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಅಂಶ ಏನೆಂದರೆ ಈ ಯೋಜನೆಗಳು ಶಕ್ತಿ ಯೋಜನೆ ಅಡಿಯಲ್ಲಿ ಬರುವುದಿಲ್ಲ ಹೀಗಾಗಿ ಮಹಿಳೆಯರಾಗಲಿ ಪುರುಷರಾಗಲಿ ಇಲ್ಲವೇ ನಿಯಮಗಳ ಅನುಸಾರವಾಗಿ ಬರುವಂತಹ ಮಕ್ಕಳಾಗಲಿ ಪೂರ್ಣ ಪ್ರಮಾಣದಲ್ಲಿ ಹಣವನ್ನು ಕೊಟ್ಟು ಇಂತಹ ಪ್ಯಾಕೇಜ್ (KSRTC Travel Package) ಅನ್ನು ಪಡೆದುಕೊಳ್ಳಬಹುದಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂತಹ ದೇವಸ್ಥಾನಗಳ ದರ್ಶನವನ್ನು ನೀಡುತ್ತಿರುವಂತಹ ಕೆಎಸ್ಆರ್ಟಿಸಿ ಯೋಜನೆ ನಿಜಕ್ಕೂ ಕೂಡ ಸಾಕಷ್ಟು ಅರ್ಥಪೂರ್ಣವಾಗಿದೆ.

ಇದಪ್ಪ ಯೋಜನೆ ಅಂದ್ರೆ- 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ? Post Office Scheme

Comments are closed.