Bad Credit Loan: ಕ್ರೆಡಿಟ್ ಸ್ಕೋರ್ ಎಷ್ಟೇ ಕಡಿಮೆ ಇದ್ದರೂ ಹೀಗೆ ಮಾಡಿದರೆ ಲೋನ್ ಕೊಡ್ತಾರೆ- ಕೊಡಲ್ಲ ಅನ್ನೋಕೆ ಚಾನ್ಸ್ ಇಲ್ಲ.

Easiest way to get a Loan even with a bad credit- Here are the best ways to get Bad credit Loan

Bad Credit Loan: ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದ್ದರೂ ಅಥವಾ ಜೀರೋ ಆಗಿದ್ದರೂ ಕೂಡ ಸಾಲ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸಾಲ ಪಡೆದುಕೊಳ್ಳುವುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಈ ಸಂದರ್ಭದಲ್ಲಿ ಸಾಲ ಪಡೆದುಕೊಂಡು ತೀರಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಹೆಚ್ಚಾಗುತ್ತದೆ ಎಂಬುದನ್ನು ನೀವಿಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕೆಲವೊಂದು ಅರ್ಜೆಂಟ್ ಸಂದರ್ಭದಲ್ಲಿ ನಿಜಕ್ಕೂ ಕೂಡ ಈ ರೀತಿಯ ಪರ್ಸನಲ್ ಲೋನ್ ಗಳು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾನ್ಯವಾಗಿ ಬೇರೆ ಸಾಲಗಳಿಗೆ ಹೋಲಿಸಿದರೆ ಈ ಸಾಲಗಳಲ್ಲಿ ಬಡ್ಡಿದರ ಹೆಚ್ಚಾಗಿರುತ್ತದೆ ಎನ್ನುವುದು ಕೂಡ ಸತ್ಯವಾಗಿದೆ. ಇನ್ನು ಕೆಲವೊಂದು ಕಠಿಣ ನಿಯಮಗಳನ್ನು ಕೂಡ ಈ ಸಾಲವನ್ನು ಪಡೆದುಕೊಳ್ಳುವವರ ಮೇಲೆ ವಿಧಿಸಲಾಗುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿದೆ.

Easiest way to get a Loan even with a bad credit- Here are the best ways to get Bad credit Loan
Easiest way to get a Loan even with a bad credit- Here are the best ways to get Bad credit Loan

ಬ್ಯಾಡ್ ಕ್ರೆಡಿಟ್ ಸ್ಕೋರ್ ಲೋನ್ ಅಂದ್ರೆ ಏನು? – What is Bad Credit Loan

ಅತ್ಯಂತ ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ ಅಥವಾ ಯಾವುದೇ ರೀತಿಯ ಕ್ರೆಡಿಟ್ ಹಿಸ್ಟರಿ ಇಲ್ಲದಿರುವವರಿಗೆ ನೀಡಬಹುದಾದಂತಹ ಲೋನ್ ಇದಾಗಿದೆ. ಅತ್ಯಂತ ಅರ್ಜೆಂಟ್ ಆಗಿ ಹಣದ ಅವಶ್ಯಕತೆ ಇದ್ದಾಗ ಈ ರೀತಿಯ ಲೋನ್ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಕೂಡ ಸಾಕಷ್ಟು ವಿಧಾನಗಳಿದ್ದು ಬನ್ನಿ ಅವುಗಳ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದನ್ನು ಕೂಡ ಓದಿ: Personal Loan: ಸೆಲ್ಫಿಯೇ ಹಾಕಿ ಆಧಾರ್ ತೋರಿಸಿದರೆ ಸಾಕು- ಸಿಗುತ್ತೆ ಎರಡು ಲಕ್ಷ ಲೋನ್. ಗ್ಯಾರಂಟಿ ಕೂಡ ಬೇಡ ಕಣ್ರೀ

ಬ್ಯಾಡ್ ಕ್ರೆಡಿಟ್ ಸ್ಕೋರ್ ಲೋನ್ಗಳ ವಿಧಾನಗಳು- Type of loan available even with Bad credit score

ಆಸ್ತಿಯನ್ನು ಅಡವಿಟ್ಟು ಲೋನ್ ಪಡೆದುಕೊಳ್ಳುವುದು

ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಕಾರಣದಿಂದಾಗಿ ಬ್ಯಾಂಕ್ ಅಥವಾ NBFC ಕಂಪನಿಗಳಲ್ಲಿ ಲೋನ್ ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಹೀಗಾಗಿ ನೀವು ನಿಮ್ಮ ಸ್ವಂತ ಆಸ್ತಿಯನ್ನು ಅಡ ಇಡುವ ಮೂಲಕ ಸಾಲವನ್ನು ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ರು ಕೂಡ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಪ್ರಾಪರ್ಟಿ ವ್ಯಾಲ್ಯೂ ಹಾಗೂ ನಿಮ್ಮ ಮರುಪಾವತಿ ಮಾಡುವಂತಹ ಸಾಮರ್ಥ್ಯದ ಮೇಲೆ ನೀವು ಪಡೆದುಕೊಳ್ಳುವಂತಹ ಸಾಲ ಹಾಗೂ ಅದರ ಮೇಲಿನ ಬಡ್ಡಿ ನಿರ್ಧಾರವಾಗುತ್ತದೆ.

ಗೋಲ್ಡ್ ಲೋನ್(Gold Loan)

ಇದು ಕೂಡ ಅತ್ಯಂತ ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾದ ಲೋನ್ ಗಳಲ್ಲಿ ಒಂದಾಗಿದೆ. ನಿಮ್ಮ ಬಳಿ ಇರುವಂತಹ ಚಿನ್ನವನ್ನು ಆಡ ಇರುವ ಮೂಲಕ ಅದರ ಈಗಿನ ಮೌಲ್ಯಕ್ಕೆ ಸರಿಹೊಂದುವ ರೀತಿಯಲ್ಲಿ ನಿಯಮಗಳ ಅನುಸಾರವಾಗಿ ನೀವು ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಚಿನ್ನದ ತೂಕ ಹಾಗೂ ಅದರ ಪರಿಶುದ್ಧತೆ ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಸೆಕ್ಯೂರಿಟಿಗಳ ಮೇಲೆ ಲೋನ್

ಒಂದು ವೇಳೆ ನೀವು ಯಾವುದೇ ಬ್ಯಾಂಕಿನಲ್ಲಿ ಮ್ಯೂಚುವಲ್ ಫಂಡ್ ಅಥವಾ ಬಾಂಡ್ ಗಳ ಮೇಲೆ ಹೂಡಿಕೆ ಮಾಡಿದರೆ ಅದೇ ಬ್ಯಾಂಕಿನಲ್ಲಿ ನೀವು ಅವುಗಳ ಸೆಕ್ಯೂರಿಟಿ ಆಧಾರದ ಮೇಲೆ ಅವುಗಳ ಕೆಲವೊಂದು ನಿರ್ದಿಷ್ಟ ನಿಯಮಿತ ಮೌಲ್ಯಗಳ ಮೇಲೆ ಸಾಲವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿ ಮಹತ್ವದ್ದಾಗಿರುವುದಿಲ್ಲ.

ಬ್ಯಾಡ್ ಕ್ರೆಡಿಟ್ ಸ್ಕೋರ್ ನಲ್ಲಿ ಲೋನ್ ಪಡೆದುಕೊಳ್ಳುವುದಕ್ಕೆ ಐದು ಬೆಸ್ಟ್ ಅಪ್ಲಿಕೇಶನ್ ಗಳು

Money View

ಇದು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಿಜಿಸ್ಟರ್ ಆಗಿರುವಂತಹ ಒಂದು NBFC ಕಂಪನಿಯಾಗಿದೆ. 5 ಲಕ್ಷ ರೂಪಾಯಿಗಳ ವರೆಗೂ ಲೋನ್ ಪಡೆದುಕೊಳ್ಳಬಹುದು ಕ್ರೆಡಿಟ್ ಸ್ಕೋರ್ 650ರ ಮೇಲೆ ಇದ್ದರೂ ಸಾಕು. ಒಂದು ವೇಳೆ ನೀವು ಇಲ್ಲಿ ಲೋನ್ (Bad Credit Loan) ಪಡೆದುಕೊಂಡು ಸರಿಯಾದ ಸಮಯದಲ್ಲಿ ಕಟ್ಟಿದರೆ ನಿಮ್ಮ ಸಿವಿಲ್ ಸ್ಕೋರ್ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೊಂದು ಪ್ರಮುಖ ಅಂಶಗಳು ನೀವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. (Discover Moneyview’s tailored financial solutions, designed to meet your unique needs and aspirations)

  1. ಯಾವುದೇ ಕೊಲೆಟರಲ್ ಇಲ್ಲದೆ ಲೋನ್ ಪಡೆದುಕೊಳ್ಳಬಹುದು.
  2. 100% ಪೇಪರ್ ಲೆಸ್ ಹಾಗೂ ಸಂಪೂರ್ಣವಾಗಿ ಆನ್ಲೈನ್ ಮೂಲಕ ಪಡೆದುಕೊಳ್ಳುವಂತಹ ಲೋನ್ ಪ್ರಕ್ರಿಯೆ ಇದಾಗಿದೆ.
  3. ಪ್ರತಿ ತಿಂಗಳಿಗೆ ಬಡ್ಡಿದರ 1.33 ಪ್ರತಿಶತದಿಂದ ಪ್ರಾರಂಭವಾಗಿ ವರ್ಷಕ್ಕೆ 16 ಪ್ರತಿಶತದ ವರೆಗೆ ಇರುತ್ತದೆ.
  4. ಪ್ರೊಸೆಸಿಂಗ್ ಶುಲ್ಕ ಎರಡು ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಸಾಲವನ್ನು ಕಟ್ಟುವುದಕ್ಕೆ 60 ತಿಂಗಳುಗಳ ಅವಕಾಶವನ್ನು ಕೂಡ ನೀಡಲಾಗುತ್ತದೆ.

Upwards Personal Loan

ಈ ಅಪ್ಲಿಕೇಶನ್ ಮೂಲಕ ನೀವು 25,000 ಗಳಿಂದ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಬೇರೆ ಬೇರೆ ಕಾರಣಗಳಿಗೆ ನೀವು ಈ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಬಹುದು ನಿಮಗೆ ಕಷ್ಟದ ಪರಿಸ್ಥಿತಿಯಲ್ಲಿ ಸಹಾಯವನ್ನು ನೀಡುವ ಕೆಲಸವನ್ನು ಮಾಡುತ್ತದೆ. ಈ ಲೋನ್ ಅಪ್ಲಿಕೇಶನ್ ಬಗ್ಗೆ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನಿಸಬೇಕಾಗುತ್ತದೆ.

  1. 100% ಡಿಜಿಟಲ್ ಲೋನ್ ಪ್ರಕ್ರಿಯೆ ಇದಾಗಿರುತ್ತದೆ.
  2. ಲೋನ್ ಮೇಲೆ ಪ್ರೊಸೆಸಿಂಗ್ ಫೀಸ್ 5 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  3. ಇಲ್ಲಿ ಕೂಡ ಮಿನಿಮಮ್ 650 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಇರಬೇಕಾಗಿರುತ್ತದೆ.

Privo Instant Personal Loan

ಇದು ಕೂಡ ನಿಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ಎರಡು ಲಕ್ಷ ರೂಪಾಯಿಗಳ ವರೆಗೆ ಸಾಲ (Bad Credit Loan) ಸೌಲಭ್ಯವನ್ನು ಒದಗಿಸುತ್ತದೆ. ಇಲ್ಲಿ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನಿಸಬೇಕಾಗುತ್ತದೆ.

  1. ಇಲ್ಲಿ ನಿಮಗೆ 20,000ಗಳಿಂದ ಪ್ರಾರಂಭಿಸಿ 2 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ.
  2. ಮೂರರಿಂದ 60 ತಿಂಗಳ ಒಳಗೆ ಮರುಪಾವತಿ ಮಾಡುವುದಕ್ಕೆ ಫ್ಲೆಕ್ಸಿಬಲ್ ಸಮಯಾವಕಾಶವನ್ನು ನೀಡಲಾಗುತ್ತದೆ.
  3. ವರ್ಷಕ್ಕೆ ಬಡ್ಡಿದರ 13.49 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  4. ನಿಮ್ಮ ಮಿನಿಮಮ್ ಸಿಬಿಲ್ ಸ್ಕೋರ್ 670 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

ಬ್ಯಾಡ್ ಕ್ರೆಡಿಟ್ ಸ್ಕೋರಿದ್ರು ಲೋನ್ ಗೆ ಅಪ್ಲೈ ಮಾಡೋದು ಹೇಗೆ?- How to Apply for a bad Credit Loan

  1. ಮೊದಲನೇದಾಗಿ ಈಗಾಗಲೇ ನಾವು ಹೇಳಿರುವ ಹಾಗೆ ಇರುವಂತಹ ಗೂಗಲ್ ಪ್ಲೇ ಸ್ಟೋರ್ ಆಪ್ಲಿಕೇಶನ್ ಗಳನ್ನು ನೀವು ಡೌನ್ಲೋಡ್ ಮಾಡಿಕೊಂಡು ಮಿನಿಮಮ್ ವೈಯಕ್ತಿಕ ಮಾಹಿತಿಗಳನ್ನು ನೀಡುವ ಮೂಲಕ ಅಕೌಂಟ್ ಕ್ರಿಯೆಟ್ ಮಾಡಬೇಕು.
  2. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನೀಡುವ ಮೂಲಕ ವೆರಿಫಿಕೇಷನ್ ಪ್ರಕ್ರಿಯೆಯನ್ನು ಪೂರೈಸಬೇಕು.
  3. ಇದಾದ ನಂತರ ನೀವು ನಿಮ್ಮ ಆದಾಯದ ದಾಖಲೆ ಪತ್ರಗಳನ್ನು ಒದಗಿಸಬೇಕು ಹಾಗೂ ನಿಮ್ಮ ಕೆಲಸದ ಮಾಹಿತಿಯನ್ನು ಕೂಡ ನೀಡಬೇಕಾಗಿರುತ್ತದೆ.
  4. ಇದೆಲ್ಲಾ ಆದ ನಂತರ ನೀವು ನಿಮಗೆ ಬೇಕಾಗಿರುವಂತಹ ಸಾಲದ ಆಯ್ಕೆಯನ್ನು ಮಾಡಬಹುದಾಗಿದ್ದು ಈ ಸಂದರ್ಭದಲ್ಲಿ ನೀವು ಬೇಕಾಗಿರುವಂತಹ ಸಾಲದ ಮೊತ್ತ, ಬಡ್ಡಿ ಮರುಪಾವತಿಯ ಸಮಯ ಎಲ್ಲವನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ.
  5. ಒಮ್ಮೆ ನೀವು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದ ನಂತರ ಕಂಪನಿಯವರು ನಿಮ್ಮ ಅರ್ಜಿಯನ್ನು ಹಾಗೂ ನೀಡಿರುವಂತಹ ವಿವರಗಳನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಿ ನಂತರ ನಿಮ್ಮನ್ನು ಕಾಂಟಾಕ್ಟ್ ಮಾಡುತ್ತಾರೆ.
  6. ಎಲ್ಲಾ ರೀತಿಯಲ್ಲಿ ಸರಿ ಹೊಂದಿರಲಿ ನೀವು ಕೇಳಿರುವಂತಹ ಹಣವನ್ನು ಕೆಲವೇ ಗಂಟೆಗಳಲ್ಲಿ ಅಥವಾ ದಿನದಲ್ಲಿ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

Comments are closed.