Loan: ಯಾರು ಲೋನ್ ಕೊಟ್ಟಿಲ್ಲ ಅಂದ್ರೆ- ಇಲ್ಲಿ ಕೊಡ್ತಾರೆ. ಗ್ಯಾರಂಟಿ ಬೇಡ, ಹಣ ಮಾತ್ರ ಕೊಡ್ತಾರೆ. ಮಹಿಳೆಯರೇ ಅರ್ಜಿ ಹಾಕಿ, ಲೋನ್ ಪಡೆಯಿರಿ.

Here are the different types of loan available- Eligibility, Documents required and other details explained in kannada

Get Loan easily without any guarantee : ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರ ಪ್ರತಿ ಬಾರಿ ಕೂಡ ಪ್ರಮುಖವಾಗಿ ಮಹಿಳೆಯರನ್ನು ಸಮಾಜದಲ್ಲಿ ಆರ್ಥಿಕವಾಗಿ ಮುಂದೆ ಬರುವ ದಾರಿ ಮಾಡಿಕೊಡುವುದಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವಂತಹ ವಿಶೇಷ ಲೋನ್ ಯೋಜನೆಗಳ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

ಒಂದು ವೇಳೆ ನೀವು ಮಹಿಳೆಯರಾಗಿದ್ದರೆ ಹಾಗೂ ಈಗಾಗಲೇ ವ್ಯಾಪಾರವನ್ನು ಹೊಂದಿದ್ದು ಅದನ್ನು ವಿಸ್ತರಿಸುವಂತಹ ಯೋಜನೆ ಮಾಡುತ್ತಿದ್ದರೆ ಅಥವಾ ಹೊಸದಾಗಿ ವ್ಯಾಪಾರವನ್ನು ಪ್ರಾರಂಭಿಸುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಖಂಡಿತವಾಗಿ ನಿಮಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಬೇಕಾಗಿರುವಂತಹ ಆರ್ಥಿಕ ಸಹಾಯವನ್ನು ನೀಡುವಂತಹ ಲೋನ್ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. 50,000 ಗಳಿಂದ ಪ್ರಾರಂಭಿಸಿ ಒಂದು ಕೋಟಿ ರೂಪಾಯಿಗಳವರೆಗು ಕೂಡ ನೀವು ಈ ಲೋನ್ ಯೋಜನೆಯ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Here are the different types of loan available- Eligibility, Documents required and other details explained in kannada
Here are the different types of loan available- Eligibility, Documents required and other details explained in kannada

ಮಹಿಳೆಯರಿಗಾಗಿ ಯಾವೆಲ್ಲ ಲೋನ್ ಗಳು ಲಭ್ಯ ಇವೆ?- Options while getting Loan

ಮಹಿಳೆಯರಿಗಾಗಿ ಹೊಸ ಬಿಸಿನೆಸ್ ಅನು ಪ್ರಾರಂಭಿಸುವುದಕ್ಕೆ ಅಥವಾ ಇರುವಂತಹ ಬಿಸಿನೆಸ್ ಅನ್ನು ವಿಸ್ತರಿಸುವುದಕ್ಕೆ ಹತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ, ಒಂದು ಕೋಟಿ ರೂಪಾಯಿಗಳವರೆಗು ಕೂಡ ಈ ಯೋಜನೆಗಳ ಮೂಲಕ ನೀವು ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸಬ್ಸಿಡಿನಲ್ಲಿ ಕೂಡ ಸಿಗುತ್ತದೆ.

  1. ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ ನಲ್ಲಿ ನೀವು 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬಡ್ಡಿದರ ಕೇವಲ ಎಂಟರಿಂದ ಹನ್ನೆರಡು ಪ್ರತಿಶತ ಆಗಿರುತ್ತದೆ.
  2. ಸೆಂಟ್ ಕಲ್ಯಾಣಿ ಮಹಿಳಾ ಲೋನ್ ಸ್ಕೀಮ್ ನಲ್ಲಿ ನಿಮಗೆ ಒಂದು ಕೋಟಿ ರೂಪಾಯಿಗಳವರೆಗು ಕೂಡ ಸಾಲ ಸಿಗುತ್ತದೆ ಹಾಗೂ ಈ ಲೋನ್ ಮೇಲೆ 8.70 ರಿಂದ 8.95% ರವರೆಗೆ ಬಡ್ಡಿಯನ್ನು ವಿಧಿಸಲಾಗುತ್ತದೆ.
  3. ಮಹಿಳಾ ಸಮೃದ್ಧಿ ಲೋನ್ ಯೋಜನೆಯಲ್ಲಿ 1.25 ಲಕ್ಷ ರೂಪಾಯಿಗಳ ವರೆಗೂ ಲೋನ್ ಸಿಗುತ್ತದೆ.
  4. ದೇನ ಶಕ್ತಿ ಲೋನ್ ಯೋಜನೆ ಅಡಿಯಲ್ಲಿ ನಿಮಗೆ 20 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತದೆ ಹಾಗೂ 25 ಪ್ರತಿಶತಕ್ಕೂ ಕಡಿಮೆ ಬಡ್ಡಿದರವನ್ನು ವಿಧಿಸಲಾಗುತ್ತದೆ.
  5. ಮಹಿಳಾ ಸ್ವರ್ಣಿಮಾ ಲೋನ್ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಲೋನ್ ಸಿಗುತ್ತದೆ ಹಾಗೂ ಐದು ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.
  6. ಭಾರತೀಯ ಮಹಿಳಾ ಬ್ಯಾಂಕ್ ಬಿಸಿನೆಸ್ ಲೋನ್ ಅಡಿಯಲ್ಲಿ ನಿಮಗೆ ಬರೋಬ್ಬರಿ 20 ಕೋಟಿ ರೂಪಾಯಿವರೆಗೂ ಸಾಲ ಸಿಗುತ್ತದೆ ಹಾಗೂ ಅದರ ಮೇಲೆ ವಿಧಿಸಲಾಗುವ ಬಡ್ಡಿ 10.15 ರಿಂದ 13.65% ಆಗಿರುತ್ತದೆ.
  7. ಉದ್ಯೋಗಿನಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತದೆ ಹಾಗೂ ಬಡ್ಡಿದರ ಬ್ಯಾಂಕ್ ಹಾಗೂ ಮಾರುಕಟ್ಟೆಯ ಆಧಾರದ ಮೇಲೆ ನಿರ್ಧಾರಿತವಾಗಿರುತ್ತದೆ.

ಇದನ್ನು ಕೂಡ ಓದಿ; Instant Loan: ತಕ್ಷಣ ನಿಮಗೆ ಮೂರು ಲಕ್ಷ ಬೇಕಂದ್ರೆ ನೀವು ಲೋನ್ ಪಡೆಯಿರಿ, ಗ್ಯಾರಂಟಿ ಬೇಡ ತಕ್ಷಣ ಕೊಡ್ತಾರೆ.

ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ(PM mudra loan scheme)

ಇದು ಕೂಡ ಸರ್ಕಾರದಿಂದ ಜಾರಿಗೆ ತರಲಾಗಿರುವಂತಹ ಲೋನ್ ಯೋಜನೆಯಾಗಿದ್ದು ಒಂದು ವೇಳೆ ನೀವು ಪ್ರಾರಂಭಿಸಬೇಕಾಗಿರುವಂತಹ ವ್ಯಾಪಾರಕ್ಕೆ ಹಣದ ಕಡಿಮೆ ಆಗಿದ್ದರೆ ನೀವು ಈ ಯೋಜನೆಯ ಅಡಿಯಲ್ಲಿ 10 ಲಕ್ಷ ರೂಪಾಯಿಗಳವರೆಗು ಲೋನ್ ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಎಂಟರಿಂದ ಹನ್ನೆರಡು ಪ್ರತಿಶತ ಬಡ್ಡಿದರವನ್ನು ಇದರ ಮೇಲೆ ವಿಧಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನವಹಿಸಬೇಕಾಗುತ್ತದೆ.

  1. ಮುದ್ರಾ ಲೋನ್ ಯೋಜನೆ ಮೇಲೆ ಯಾವುದೇ ಪ್ರೊಸೆಸಿಂಗ್ ಫೀಸ್ ತಗಲುವುದಿಲ್ಲ.
  2. ಯಾವುದೇ ಬ್ಯಾಂಕ್ ನಿಂದಲೂ ಕೂಡ ನೀವು ಮುದ್ರಾ ಲೋನ್ ಪಡೆದುಕೊಳ್ಳಬಹುದು.
  3. ಒಂದು ವೇಳೆ ನಿಮಗೆ ಈ ಲೋನ್ ಯೋಜನೆ ಅಡಿಯಲ್ಲಿ ಲೋನ್ ಪಡೆದುಕೊಂಡ ನಂತರ ಕಟ್ಟಲು ಕಷ್ಟ ಆಗುತ್ತಿದೆ ಎಂದರೆ ಕಟ್ಟುವಂತಹ ಸಮಯದ ಅವಧಿಯನ್ನು ಐದು ವರ್ಷಗಳವರೆಗೂ ಕೂಡ ವಿಸ್ತರಿಸಿಕೊಳ್ಳಬಹುದಾಗಿದೆ.
  4. ಒಂದು ವೇಳೆ ನೀವು ಮುದ್ರಾ ಶಿಶು ಲೋನ್ ಯೋಜನೆಯನ್ನು ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ 12 ತಿಂಗಳಿಗೆ 2% ಬಡ್ಡಿ ದರದಲ್ಲಿ ಸಬ್ಸಿಡಿ ದೊರಕುತ್ತದೆ.
  5. ಈ ಲೋನ್ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಬಳಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇರಬೇಕಾಗುತ್ತದೆ.

ಸೆಂಟ್ ಕಲ್ಯಾಣಿ ಮಹಿಳಾ ಲೋನ್ ಯೋಜನೆ

ಮಹಿಳೆಯರಿಗಾಗಿ ಅವರ ವ್ಯಾಪಾರವನ್ನು ವಿಸ್ತರಿಸಲು ಹಾಗೂ ಹೊಸದಾಗಿ ಪ್ರಾರಂಭಿಸಲು ಒಂದು ಕೋಟಿ ರೂಪಾಯಿಗಳವರೆಗು ಕೂಡ ಆರ್ಥಿಕ ಸಹಾಯವನ್ನು ಲೋನ್ ರೂಪದಲ್ಲಿ ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. 8.70 ರಿಂದ 8.95 ಪ್ರತಿಶತದವರೆಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ.

ಪ್ರಮುಖವಾಗಿ ಗಮನಿಸಬೇಕಾಗಿರುವಂತಹ ವಿಚಾರಗಳು

  1. ನೀವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಈ ಯೋಜನೆ ಅಡಿಯಲ್ಲಿ ಸುಲಭ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದು.
  2. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಲು ಇರುವಂತಹ ಮಹಿಳೆಯರು ಭಾರತೀಯರಾಗಿರಬೇಕು.
  3. ಈ ಯೋಜನೆ ಅಡಿಯಲ್ಲಿ ಕೂಡ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ ಹಾಗೂ ಯಾವುದೇ ರೀತಿಯ ಗ್ಯಾರಂಟರ್ ಅವಶ್ಯಕತೆ ಕೂಡ ಇರುವುದಿಲ್ಲ.

ಮಹಿಳಾ ಸ್ವರ್ಣಿಮಾ ಲೋನ್ ಯೋಜನೆ

ಹಿಂದುಳಿದಿರುವಂತಹ ಮಹಿಳೆಯರಿಗೆ ವ್ಯಾಪಾರಕ್ಕಾಗಿ 2 ಲಕ್ಷ ರೂಪಾಯಿಗಳವರೆಗು ಕೂಡ ಈ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ವಾರ್ಷಿಕವಾಗಿ ಕೇವಲ 5% ಬಡ್ಡಿದರವನ್ನು ಮಾತ್ರ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಹಿಂದುಳಿದ ವರ್ಗದ 18ರಿಂದ 55 ವರ್ಷದ ನಡುವಿನ ಮಹಿಳೆಯಾಗಿದ್ದರೆ ನೀವು ಈ ಯೋಜನೆ ಅಡಿಯಲ್ಲಿ ಲೋನ್ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಗಮನವಹಿಸಬೇಕಾಗಿರುವ ಪ್ರಮುಖ ಅಂಶಗಳು

  1. ಲೋನ್ಗಾಗಿ ಅರ್ಜಿ ಸಲ್ಲಿಸುವವರು ಪ್ರಮುಖವಾಗಿ ಮಹಿಳೆ ಆಗಿರಬೇಕು ಹಾಗೂ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರಬಾರದು.
  2. ಅರ್ಜಿ ಸಲ್ಲಿಸುವವರ ವ್ಯಾಪಾರ ಸಂಸ್ಥೆ ಇರಬೇಕು.
  3. ವಯೋ ಮಾನ್ಯತೆ 18 ವರ್ಷದಿಂದ ಪ್ರಾರಂಭವಾಗಿ 56 ವರ್ಷಗಳ ನಡುವೆ ಇರಬೇಕು ಎಂಬುದಾಗಿ ತಿಳಿಸಲಾಗಿದೆ.

ಮಹಿಳಾ ಲೋನ್ಗಳಿಗಾಗಿ ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ ಗಳು

  1. ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕೆಲವೊಮ್ಮೆ 18 ವರ್ಷಗಳಿಂದ ಮೇಲೆ ಇರಬೇಕಾಗಿರುತ್ತದೆ ಕೆಲವೊಂದು ಯೋಜನೆಗಳಲ್ಲಿ 21 ವರ್ಷಕ್ಕಿಂತ ಮೇಲೆ ಇರಬೇಕಾಗಿರುತ್ತದೆ.
  2. ಲೋನ್ಗಾಗಿ ಅರ್ಜಿ ಸಲ್ಲಿಸುವಂತಹ ಮಹಿಳೆಯ ಬಳಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗಳಂತಹ ಪ್ರಮುಖ ಸರ್ಕಾರಿ ದಾಖಲೆಗಳು ಇರಲೇಬೇಕು.
  3. ಈ ಮೇಲೆ ಹೇಳಲಾಗಿರುವಂತಹ ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವಂತಹ ಮಹಿಳೆ ಕಡ್ಡಾಯವಾಗಿ ಭಾರತೀಯ ಮಹಿಳೆಯಾಗಿರಬೇಕು.
  4. ಇನ್ನು ಈ ಮೇಲಿನ ಯೋಜನೆಗಳನ್ನು ಹಾಗೂ ಅವುಗಳಿಂದ ಬರುವಂತಹ ಸಾಲದ ಹಣವನ್ನು ನಿಮ್ಮ ಹೊಸ ವ್ಯಾಪಾರವನ್ನು ಪ್ರಾರಂಭಿಸುವುದಕ್ಕಾಗಿ ಕೂಡ ಬಳಸಿಕೊಳ್ಳಬಹುದು ಹಾಗೂ ಈಗಾಗಲೇ ಇರುವಂತಹ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡಿಕೊಳ್ಳಲು ಕೂಡ ಬಳಸಿಕೊಳ್ಳಬಹುದಾಗಿದೆ. ಇನ್ನು ಬೇರೆ ದಾಖಲೆ ಪತ್ರಗಳು ಯೋಜನೆಗಳಿಗೆ ಅನುಸಾರವಾಗಿ ಬದಲಾಗುತ್ತವೆ.

Comments are closed.