Samantha Ruth Prabhu: ಮದುವೆ ಆಯಿತು, ವಿಚ್ಚೇದನ ಕೂಡ ಆಯಿತು: ಆದರೂ ಸಮಂತಾ ಮೈ ಮೇಲೆ ನಾಗ ಚೈತನ್ಯ ಟ್ಯಾಟೂ ಯಾಕೆ ಇದೆ ಗೊತ್ತೇ? ಇನ್ನು ಇರಲು ಕಾರಣವೇನು ಗೊತ್ತೆ?
Samantha Ruth Prabhu: ನಟಿ ಸಮಂತಾ (Samantha) ರುತ್ ಪ್ರಭು ಅವರು ಈಗ ಮಯೋಸೈಟಿಸ್ ಸಂಸ್ಯೆಯಿಂದ ಚೇತರಿಸಿಕೊಂಡು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ಸಮಂತಾ ಅಭಿನಯದ ಶಾಕುಂತಲಂ (Shakuntalam) ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದ ಸಿನಿಪ್ರಿಯರು ಸ್ವಲ್ಪ ಸ್ಲೋ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ಸಮಂತಾ ಅವರು ಹಲವು ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸುತ್ತಿದ್ದು, ಇತ್ತೀಚೆಗೆ ಸಿಟಾಡೆಲ್ (Citadel) ವೆಬ್ ಸೀರೀಸ್ ಪ್ರೀಮಿಯರ್ ನಲ್ಲಿ ಪಾಲ್ಗೊಂಡಿದ್ದರು, ಪ್ರಿಯಾಂಕ ಚೋಪ್ರಾ ಅವರು ಅಭಿನಯಿಸಿರುವ ಈ ವೆಬ್ ಸೀರಿಸ್ ನ ಪ್ರೀಮಿಯರ್ ಈಗಷ್ಟೇ ನಡೆದಿದೆ, ಈ ಕಾರ್ಯಕ್ರಮಕ್ಕೆ ಸಮಂತಾ, ನಟ ವರುಣ್ ಧವನ್ (Varun Dhawan) ಸೇರಿದಂತೆ ಸಾಕಷ್ಟು ಕಲಾವಿದರು ಸೆಲೆಬ್ರಿಟಿಗಳು ಹಾಜರಿದ್ದರು. ಈ ಇವೆಂಟ್ ನಲ್ಲಿ ಸಮಂತಾ ಅವರ ಲುಕ್ ಎಲ್ಲರ ಗಮನ ಸೆಳೆದಿದೆ..
ಸಮಂತಾ ಅವರು ತಮ್ಮ ಸ್ಟೈಲಿಶ್ ಕಾಸ್ಟ್ಯೂಮ್ ಇಂದ ಎಲ್ಲರ ಗಮನ ಸೆಳೆದಿದ್ದರು. ಆ ಡ್ರೆಸ್ ನಲ್ಲಿ ಎಲ್ಲರನ್ನು ಆಕರ್ಷಿಸಿದ್ದು ಸಮಂತಾ ಅವರ ದೇಹದ ಭಾಗದಲ್ಲಿರುವ ಟ್ಯಾಟೂ. ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ನಂತರ ಸಮಂತಾ ಅವರು Chay ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಟ್ಯಾಟೂ ಇನ್ನು ಹಾಗೆಯೇ ಇದೆ. ಚೈತನ್ಯ (Nagachaitanya) ಅವರಿಂದ ವಿಚ್ಛೇದನ ಪಡೆದ ನಂತರ ಕೂಡ ಟ್ಯಾಟೂ ಹಾಗೆಯೇ ಇರುವುದನ್ನು ನೋಡಿ ಅಭಿಮಾನಿಗಳು ಆಶ್ಚರ್ಯಪಟ್ಟಿದ್ದಾರೆ.
ಸಮಂತಾ ಅವರು ಆ ಟ್ಯಾಟೂವನ್ನು ಚೈತನ್ಯ ಅವರಿಗಾಗಿ ಡೆಡಿಕೇಟ್ ಮಾಡಿದ್ದರು. ಅಷ್ಟೇ ಅಲ್ಲದೆ, ಅವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ ಸಿನಿಮಾ ನೆನಪಲ್ಲಿ YMC ಎಂದು ಕತ್ತಿನ ಹಿಂಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಟ್ಯಾಟೂ ಕೂಡ ಈಗಲೂ ಹಾಗೆಯೇ ಇದೆ. ಈಗ ಟ್ಯಾಟೂಗಳನ್ನು ನೋಡಿದ ಅಭಿಮಾನಿಗಳು. ಚೈತನ್ಯ ಅವರ ಮೇಲೆ ಇನ್ನು ಪ್ರೀತಿ ಇರುವುದರಿಂದ ಸಮಂತಾ ಅವರು ಈಗಲೂ ಟ್ಯಾಟೂವನ್ನು ರೀಟೇನ್ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
Comments are closed.