Gold Rate Today: ದುಬೈ ನಲ್ಲಿ 50000 ಸಾವಿರಕ್ಕೂ ಕಡಿಮೆ, ಅಮೇರಿಕ ನಂತರ ಭಾರತದಲ್ಲಿ ದಿಡೀರ್ ಎಂದು ಕುಸಿದ ಚಿನ್ನ. ಒಂದು ಗ್ರಾಂ ಗೆ ಬೆಲೆ ಎಷ್ಟು ಗೊತ್ತೇ?
Gold Rate Today: ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲರಿಗು ಆಸೆ ಇರುತ್ತದೆ, ಆದರೆ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತದೆ, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನ ಕೊಂಡುಕೊಳ್ಳುವುದು ಉತ್ತಮ. ಈ ವಾರದಲ್ಲಿ ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನದ ಆಭರಣ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ.

ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಅತಿ ಹೆಚ್ಚಾಗಿದೆ ಎನ್ನುವ ಹಂತಕ್ಕೆ ತಲುಪಿತ್ತು. ಆದರೆ ಈಗ ದೇಶದಲ್ಲಿ ಇರುವ ಹಣಕಾಸಿನ ಸಮಸ್ಯೆ, ಡಾಲರ್ ಸೂಚ್ಯಂಕ ಇದೆಲ್ಲದರಿಂದ ಚಿನ್ನಕ್ಕೆ ಇರುವ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಬಹುದು. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಎಂಸಿಕ್ಸ್ ನೀಡಿರುವ ಮಾಹಿತಿಯ ಪ್ರಕಾರ ಆದರೆ ಚಿನ್ನದ ಬೆಲೆ ಇಳಿಕೆ ಆಗಿದ್ದರು ಸಹ ಬೆಳ್ಳಿ ಬೆಲೆಯಲ್ಲಿ ಏರಿಕೆ ಆಗಿದೆ.
ಹಾಗಾಗಿ ಚಿನ್ನ ಕೊಳ್ಳುವುದಕ್ಕೆ ಇದು ಸರಿಯಾದ ಸಮಯ, ಫೆಬ್ರವರಿ ಇಂದ ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹80,000 ರೂಪಾಯಿ ತಲುಪಬಹುದು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಕಡಿಮೆ ಆಗಿದ್ದು, 10 ಗ್ರಾಮ್ ಚಿನ್ನಕ್ಕೆ ₹60,169 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ₹500 ರೂಪಾಯಿ ಆಗಿದೆ, ಬೆಳ್ಳಿ ಬೆಲೆ ಈಗ ₹73,934 ರೂಪಾಯಿ ಆಗಿದೆ.
23ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಮ್ ಗೆ ₹59,928 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹55,115 ರೂಪಾಯಿ ಆಗಿದೆ. 20 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹45,127 ರೂಪಾಯಿ ಆಗಿದೆ. ಚಿನ್ನ ಖರೀದಿ ಮಾಡುವಾಗ ಕೂಡ ಬಹಳ ಹುಷಾರಾಗಿ ಖರೀದಿ ಮಾಡಿ, ಚಿನ್ನದ ಮೇಲೆ ಹಾಲ್ ಮಾರ್ಕ್ ಸಿಂಬಲ್ ಇದ್ದರೆ ಮಾತ್ರ ಕೊಂಡುಕೊಳ್ಳಬೇಕು. ಹಾಗೆಯೇ ಚಿನ್ನದ ಬೆಲೆಯ ಮಾಹಿತಿಯನ್ನು ಈಗ ನಿಮ್ಮ ಮೊಬೈಲ್ ಗೆ ಸುಲಭವಾಗಿ ಪಡೆಯಬಹುದು, 8955664433 ಈ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ, ನಿಮ್ಮ ನಂಬರ್ ಗೆ ಮಾಹಿತಿ ಬರುತ್ತದೆ.
Comments are closed.