Dhoni: ಧೋನಿ ಅಭಿಮಾನಿಗಳ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರವೀಂದ್ರ ಜಡೇಜಾ- ದಿಡೀರ್ ಎಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ??

Dhoni: ಎಂಎಸ್ ಧೋನಿ (MS Dhoni) ಅವರ ಮೇಲಿನ ಕ್ರೇಜ್ ಜನರಲ್ಲಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಧೋನಿ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಇಂದ ನಿವೃತ್ತಿ ಪಡೆದಿದ್ದಾರೆ, ಆದರೆ ಐಪಿಎಲ್ (IPL) ನಲ್ಲಿ ಆಡುತ್ತಿದ್ದು, ಇದು ಅವರ ಕೊನೆಯ ಸೀಸನ್ ಎಂದು ಹೇಳಲಾಗುತ್ತಿದೆ. ಇದರಿಂದ ಅಭಿಮಾನಿಗಳಿಗೆ ಎಮೋಷನ್ಸ್ ಇನ್ನು ಜಾಸ್ತಿಯಾಗಿದೆ ಎಂದರೆ ತಪ್ಪಲ್ಲ. ಸಿ.ಎಸ್.ಕೆ (CSK) ತಂಡದ ಪರವಾಗಿ ಧೋನಿ ಅವರು ಆಡುತ್ತಾರೆ. ಈ ಪಂದ್ಯಗಳನ್ನು ನೋಡಲು, ಚೆನ್ನೈನ (Chennai) ಎಂ.ಚಿದಂಬರಂ ಸ್ಟೇಡಿಯಂ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.

ravindra jadeja speaks about dhoni fans Dhoni:

ಸಿ.ಎಸ್.ಕೆ ಪಂದ್ಯ ನಡೆಯುವಾಗ, ಧೋನಿ ಧೋನಿ ಎಂದು ಅವರ ಹೆಸರು ಕರೆಯುವುದು ಜಪ ಮಾಡುವುದು ನಡೆಯುತ್ತಿದೆ. ಮೈದಾನದಲ್ಲಿ ಧೋನಿ ಅವರು ಬರದೆ ಇದ್ದರು ಸಹ ಅವರ ಹೆಸರನ್ನು ಜಪ ಮಾಡುತ್ತಲೇ ಇದ್ದಾರೆ ಅಭಿಮಾನಿಗಳು. ಇನ್ನು ಈ ಸಾಲಿನ ಐಪಿಎಲ್ ನಲ್ಲಿ ಧೋನಿ ಅವರ ನಾಯಕತ್ವದ ಸಿ.ಎಸ್.ಕೆ ತಂಡವು 14 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು, 15 ಪಾಯಿಂಟ್ಸ್ ಪಡೆದು, ಪ್ಲೇಆಫ್ಸ್ ಗೆ ಹೋಗುವುದನ್ನು ಖಚಿತಪಡಿಸಿಕೊಂಡಿದೆ. ಇತ್ತೀಚೆಗೆ ಸಿ.ಎಸ್.ಕೆ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ (CSK vs DC) ನಡುವಿನ ಪಂದ್ಯ ನಡೆಯಿತು. ಇದನ್ನು ಓದಿ..RCB 2023: ಈಗಲೂ ಕೂಡ ಆರ್ಸಿಬಿ ಪ್ಲೇ ಆಫ್ ತಲುಪಿ ಕಪ್ ಗೆಲ್ಲಬಹುದು- ಅದು ಹೇಗೆ ಗೊತ್ತೇ?? ಪಕ್ಕ ಲೆಕ್ಕಾಚಾರ ಹೇಗಿದೆ ಗೊತ್ತೇ?

ಇದರಲ್ಲಿ ಸಿ.ಎಸ್.ಕೆ ತಂಡ ಗೆಲುವು ಸಾಧಿಸಿತು. ರವೀಂದ್ರ ಜಡೇಜಾ (Ravindra Jadeja) ಅವರು ಬ್ಯಾಟಿಂಗ್ ನಲ್ಲಿ 21 ರನ್ಸ್ ಭಾರಿಸಿ, 2 ವಿಕೆಟ್ ಪಡೆದು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಧೋನಿ ಅವರಿಗಿಂತ ಮೊದಲು 7ನೇ ಕ್ರಮಾಂಕದಲ್ಲಿ ಜಡೇಜಾ ಅವರು ಬ್ಯಾಟಿಂಗ್ ಮಾಡಿದರು, 20 ರನ್ಸ್ ಗಳಿಸಿ ಔಟ್ ಆದರು, ನಂತರ ಬಂದ ಎಂ.ಎಸ್.ಧೋನಿ ಅವರು 9 ಎಸೆತಗಳಲ್ಲಿ 21ರನ್ಸ್ ಭಾರಿಸಿ ತಂಡವನ್ನು ಗೆಲ್ಲಿಸಿದರು. ಈ ಪಂದ್ಯ ಮುಗಿದ ಬಳಿಕ ರವೀಂದ್ರ ಜಡೇಜಾ ಅವರು ಮಾತನಾಡಿ, ಧೋನಿ ಅವರ ಅಭಿಮಾನಿಗಳ ಬಗ್ಗೆ ಮಾತನಾಡಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

“ನಾನು ಬ್ಯಾಟಿಂಗ್ ಮಾಡುವಾಗ, ಜನರು ಮಾಹಿ ಭಾಯ್ ಹೆಸರನ್ನು ಜೋರಾಗಿ ಹೇಳುತ್ತಿದ್ದರು..ನಾನು ಧೋನಿ ಭಾಯ್ ಗಿಂತ ಬೇಗ ಕ್ರೀಸ್ ಗೆ ಬಂದು ಬ್ಯಾಟಿಂಗ್ ಮಾಡಿದರೆ, ನಾನು ಬೇಗ ಔಟ್ ಆಗಬೇಕು ಎಂದು ಜನರು ಹಿಡಿ ಶಾಪ ಹಾಕುತ್ತಾರೆ. ಇದೆಲ್ಲ ಏನೇ ಇದ್ದರೂ ಪಂದ್ಯ ಗೆಲ್ಲುವುದು ಮುಖ್ಯ, ಅದರಿಂದ ನನಗೆ ಸಂತೋಷ ಸಿಗುತ್ತದೆ..” ಎಂದು ಹೇಳಿದ್ದಾರೆ ರವೀಂದ್ರ ಜಡೇಜಾ. ಧೋನಿ ಫ್ಯಾನ್ಸ್ ಬಗ್ಗೆ ಹೇಳಿರುವ ಈ ಮಾತುಗಳು ಈಗ ವೈರಲ್ ಆಗಿದೆ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.