Yuvraj Singh: ಯುವರಾಜ್ ಸಿಂಗ್ ರವರ ಸ್ಥಾನವನ್ನು ಮೀರಿಸುವಂತಹ ಆಟಗಾರ ಸಿಕ್ಕೇ ಬಿಟ್ಟ- ಈತನೇ ನೋಡಿ ತಂಡದ ಹೀರೋ. ಯಾರು ಗೊತ್ತೇ??

Yuvraj Singh: ಟೀಮ್ ಇಂಡಿಯಾಗೆ (Team India) ಯುವರಾಜ್ ಸಿಂಗ್ (Yuvraj Singh) ಅವರು ಎಂಥ ಕೊಡುಗೆ ನೀಡಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಯುವರಾಜ್ ಸಿಂಗ್ ಅವರಂಥ ಬ್ಯಾಟ್ಸ್ಮನ್ ಒಬ್ಬ ಭಾರತ ತಂಡಕ್ಕೆ ಬೇಕು ಎನ್ನುವುದು ತಂಡದ ಹಾಗೂ ಕ್ರಿಕೆಟ್ ಪ್ರಿಯರ ಆಸೆ ಆಗಿತ್ತು, ಅದಕ್ಕೀಗ ಸಮಯ ಬಂದಿದೆ. ಯುವರಾಜ್ ಸಿಂಗ್ ಅವರಂತೆ ಸ್ಫೋಟಕವಾಗಿ ಆಡುವ ಬ್ಯಾಟ್ಸ್ಮನ್ ಒಬ್ಬ ತಂಡಕ್ಕೆ ಸಿಕ್ಕಿದ್ದಾನೆ, ಅದು ಐಪಿಎಲ್ (IPL) ಮೂಲಕ. ಆ ಆಟಗಾರ ಯಾರು ಗೊತ್ತಾ?

finally team india got replacement for yuvraj singh Yuvraj Singh:

ಯುವರಾಜ್ ಸಿಂಗ್ ಅವರಂತೆ ಸ್ಫೋಟಕವಾಗಿ ಆಡುತ್ತಿರುವ ಈ ಆಟಗಾರ ಗುರುವಾರ ನಡೆದ ಮ್ಯಾಚ್ ನಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿ, ಹೊಸ ಇತಿಹಾಸ ಸೃಷ್ಟಿಸಿದರು. 47 ಎಸೆತಗಳಲ್ಲಿ ಭರ್ಜರಿಯಾಗಿ 98 ರನ್ಸ್ ಗಳಿಸಿ ಅಜೆಯ ಇನ್ನಿಂಗ್ಸ್ ಆಡಿದರು. ಕೆಕೆಆರ್ (KKR)ವಿರುದ್ಧ ನಡೆದ ಈ ಪಂದ್ಯದಲ್ಲಿ ಈ ಆಟಗಾರನ ಸ್ಫೋಟಕ ಪ್ರದರ್ಶನದಿಂದ ತಂಡ ಗೆದ್ದಿತು. ಈ ಆಟಗಾರ ಮತ್ಯಾರು ಅಲ್ಲ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal). ಇದನ್ನು ಓದಿ..Dhoni: ಧೋನಿ ಅಭಿಮಾನಿಗಳ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರವೀಂದ್ರ ಜಡೇಜಾ- ದಿಡೀರ್ ಎಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ??

ಈ ಇನ್ನಿಂಗ್ಸ್ ನಲ್ಲಿ ಅದ್ಧೂರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶಸ್ವಿ ಅವರು 13 ಬೌಂಡರಿ ಮತ್ತು 6 ಸಿಕ್ಸರ್ ಭಾರಿಸಿದರು. ಇವರ ಸ್ಟ್ರೈಕ್ ರೇಟ್ 208.51ಇತ್ತು. ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ಪರವಾಗಿ ಆಡುವ ಈ ಬ್ಯಾಟ್ಸ್ಮನ್ ಅತ್ಯುತ್ತಮ ಇನ್ನಿಂಗ್ಸ್ ಮೂಲಕ ಭವಿಷ್ಯದಲ್ಲಿ ಭಾರತ ತಂಡದ ಪರವಾಗಿ ಇಂಥದ್ದೇ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಇವರ ಬಗ್ಗೆ ಬಿಸಿಸಿಐ (BCCI) ಕಾರ್ಯದರ್ಶಿ ಜೈ ಶಾ ಅವರು ಟ್ವೀಟ್ ಮಾಡಿ, ಮೆಚ್ಚುಗೆ ಸೂಚಿಸಿದರು.

ಈ ಥರ ಇತಿಹಾಸ ಸೃಷ್ಟಿಸಿದ್ದಕ್ಕೆ ಧನ್ಯವಾದಗಳು, ಇದೇ ಫಾರ್ಮ್ ಮುಂದುವರೆಸಿ ಎಂದು ಟ್ವೀಟ್ ಮಾಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಅವರು, ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರವಾಗಿ ಆಡುವ ಸಮಯ ಹತ್ತಿರವಿದೆ ಎಂದಿದ್ದಾರೆ. ಈ ಸಾಲಿನ ಐಪಿಎಲ್ ನಲ್ಲಿ ಯಶಸ್ವಿ ಅವರು, 12 ಇನ್ನಿಂಗ್ಸ್ ಗಳಲ್ಲಿ 575 ರನ್ಸ್ ಗಳಿಸಿದ್ದು, ಅದರಲ್ಲಿ 1 ಶತಕ ಮತ್ತು 4 ಅರ್ಧಶತಕ ಸೇರಿದೆ. ಒಟ್ಟಿನಲ್ಲಿ ಈ ಆಟಗಾರ ಆರ್.ಆರ್ (RR) ತಂಡದ ನಿಧಿ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??

Comments are closed.