Anuj Rawat: ಭಾರತ ತಂಡಕ್ಕೆ ಮತ್ತೊಬ್ಬ ಧೋನಿ ಸಿಕ್ಕಿಬಿಟ್ಟನೇ?? ಅನುಜ್ ರಾವತ್ ಔಟ್ ಮಾಡಿದ ಸ್ಟೈಲ್, ಬ್ಯಾಟಿಂಗ್ ನೋಡಿ ಜನ ಏನಂದ್ರು ಗೊತ್ತೇ??

Anuj Rawat: ಆರ್ಸಿಬಿ (RCB) ತಂಡ ನಿನ್ನೆ ನೀಡಿರುವ ಪ್ರದರ್ಶನಕ್ಕೆ ಎಲ್ಲರಿಂದಾ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಸ್ತಾನ್ ರಾಯಲ್ಸ್ (Rajasthan Royals) ತಂಡದ ವಿರುದ್ಧ ಆರ್ಸಿಬಿ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ, 59 ರನ್ ಗಳಿಗೆ ಆರ್.ಆರ್ (RR) ತಂಡವನ್ನು ಆಲೌಟ್ ಮಾಡಿ, 112 ರನ್ ಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿ, ಪಾಯಿಂಟ್ಸ್ ಟೇಬಲ್ ನಲ್ಲಿ 5ನೇ ಸ್ಥಾನಕ್ಕೆ ತಲುಪಿದೆ.

fans are happy about anuj rawat runout Anuj Rawat:

ಈ ಪಂದ್ಯದಲ್ಲಿ ಹೈಲೈಟ್ ಆಗಿದ್ದು ಅನುಜ್ ರಾವತ್ (Anuj Rawat) ಅವರು ಎಂದರೆ ತಪ್ಪಲ್ಲ. ಈ ಯುವ ಆಟಗಾರ ಬ್ಯಾಟಿಂಗ್ ನಲ್ಲಿ ಕೊನೆಯ 18ನೇ ಓವರ್ ಸಮಯಕ್ಕೆ ಬಂದು, 11 ಎಸೆತಗಳಲ್ಲಿ 29 ರನ್ಸ್ ಭಾರಿಸಿದರು. ಹಾಗೆಯೇ ದಿನೇಶ್ ಕಾರ್ತಿಕ್ (Dinesh Karthik)ಅವರ ಬದಲಾಗಿ ವಿಕೆಟ್ ಕೀಪಿಂಗ್ ಮಾಡಿ, ಅದರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ರನೌಟ್ ಮಾಡಿದ್ದು, ಥೇಟ್ ಧೋನಿ ಅವರ ಆಟವನ್ನೇ ನೋಡಿದ ಹಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Dinesh Karthik: ಆಯ್ತು ಡಿ ಕೆ ಗೆ ವಯಸ್ಸಾಯ್ತು- ಹೊರಗಡೆ ಹಾಕಿ, ಈತನಿಗೆ ಖಾಯಂ ಸ್ಥಾನ ನೀಡಿ ಎಂದ ಫ್ಯಾನ್ಸ್. ಈತನೇ ಭವಿಷ್ಯದ ಕೀಪರ್ ಅಂತೇ. ಯಾರು ಗೊತ್ತೇ??

ಎರಡನೇ ಇನ್ನಿಂಗ್ಸ್ 8ನೇ ಓವರ್ ನಲ್ಲಿ ಕರ್ಣ್ ಶರ್ಮ (Karn Sharma) ಬೌಲಿಂಗ್ ಮಾಡುವಾಗ, ಕ್ರೀಸ್ ನಲ್ಲಿ ಹಿಟ್ಮೆಯರ್ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದರು. 8ನೇ ಓವರ್ ಕೊನೆಯ ಎಸೆತದಲ್ಲಿ ಒಂದು ರನ್ ಪಡೆದು, ಎರಡನೇ ರನ್ ಪಡೆಯುವ ಪ್ರಯತ್ನದಲ್ಲಿದ್ದಾಗ, ಬಾಲ್ ಅನ್ನು ಸಿರಾಜ್ (Mohammad Siraj) ಅವರು ಬೇಗ ಹಿಡಿದು, ವಿಕೆಟ್ ಕೀಪರ್ ಅನುಜ್ ರಾವತ್ ಅವರ ಕಡೆಗೆ ಎಸೆದರು, ಅದನ್ನು ಗಮನಿಸಿದ ಹಿಟ್ಮೆಯರ್ ಮತ್ತೊಂದು ರನ್ ಬೇಡ ಎಂದು ಸೂಚಿಸಿದರು, ಅಷ್ಟರಲ್ಲಾಗಲೇ ಅಶ್ವಿನ್ ಕ್ರೀಸ್ ಇಂದ ಸ್ವಲ್ಪ ಹೊರಗೆ ಬಂದಿದ್ದರು.

ತಕ್ಷಣವೇ ಅನುಜ್ ರಾವತ್, ವಿಕೆಟ್ ಅನ್ನು ನೋಡದೆ, ಹಿಂದಿನಿಂದ ವಿಕೆಟ್ ಕಡೆಗೆ ಬಾಲ್ ಎಸೆದದ್ದು, ತಕ್ಷಣವೇ ಅದು ವಿಕೆಟ್ಸ್ ಗೆ ಬಡಿದಿದೆ. ಅಶ್ವಿನ್ ಅವರು ಕೂಡಲೇ ಕ್ರೀಸ್ ಒಳಗೆ ಬಂದರು ಸಹ, ಸ್ವಲ್ಪ ಅಂತರದಲ್ಲಿ ರನೌಟ್ ಆಗಿದ್ದಾರೆ. ಅನುಜ್ ರಾವತ್ ರನೌಟ್ ಮಾಡಿದ ಈ ರೀತಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಸ್ಟೈಲ್ ಮತ್ತು ಬ್ಯಾಟಿಂಗ್ ನಲ್ಲಿ ರನ್ಸ್ ಕಲೆ ಹಾಕಿದ ರೀತಿ ಎಲ್ಲವನ್ನು ನೋಡಿ ನೆಟ್ಟಿಗರು ಥೇಟ್ ಎಂಎಸ್ ಧೋನಿ (MS Dhoni) ಅವರ ಹಾಗೆಯೇ ಇದೆ ಎನ್ನುತ್ತಿದ್ದಾರೆ. ಇದನ್ನು ಓದಿ..RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?

Comments are closed.