Kannada News: ಇದು ಇದು ಬೇಕಾಗಿರೋದು- ಧೈರ್ಯವಾಗಿ ದೂರು ದಾಖಲು- ಅಂಡರ್ ಪಾಸ್ ನಲ್ಲಿ ಮೃವಪಟ್ಟ ಮಹಿಳೆಯ ಅಣ್ಣ ಏನು ಮಾಡಿದ್ದಾನೆ ಗೊತ್ತೇ??
Kannada News: ಭಾನುವಾರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ಅದರಲ್ಲು ನಡೆದ ಒಬ್ಬ ಮಹಿಳೆಯ ವಿಚಾರ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಅದೇನೆಂದರೆ ಭಾನುವಾರದ ಮಳೆಯಲ್ಲಿ ಅಂಡರ್ ಪಾಸ್ ಗೆ ಸಿಕಿ, ಆಂಧ್ರಪ್ರದೇಶದ ಟೆಕ್ಕಿ ಭಾನುರೇಖಾ ವಿಧಿವಿಶಳಾಗಿದ್ದಾರೆ. ಈ ಬಗ್ಗೆ ಭಾನುರೇಖಾ ಅವರ ಅಣ್ಣ ಸಂದೀಪ್ ಹಲಸೂರು ಗೇಟ್ ಪೊಲೀಸ್ ಸ್ಟೇಶನ್ ನಲ್ಲಿ ದೂರು ನೀಡಿದ್ದಾರೆ .

FIR ಕೂಡ ದಾಖಲು ಮಾಡಲಾಗಿದೆ. ಇತ್ತ ಬಿಬಿಎಂಪಿ ಅಧಿಕಾರಿಗಳು, KA 05 AG 4457 ಕಾರ್ ನ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಭಾನುವಾರ ನಡೆದಿದ್ದು ಏನು ಎಂದು ಸಂದೀಪ್ ಕಂಪ್ಲೇಂಟ್ ನಲ್ಲಿ ವಿವರಣೆ ನೀಡಿದ್ದಾರೆ..ಅಂದು ಭಾನುರೇಖಾ, ಆಕೆಯ ಅಜ್ಜಿ ಸಾಮ್ರಾಜ್, ಅಮ್ಮ ಸ್ವರೂಪ, ರಿಲೇಟಿವ್ ಗಳಾದ ಸೋಹಿತಾ, ಸವಿತಾ ಎಲ್ಲರೂ ಬೆಂಗಳೂರಿನ ಟೂರಿಸ್ಟ್ ಜಾಗಗಳಿಗೆ ಹೋಗಿದ್ದರು, ಬೆಳಗ್ಗೆ 8 ಗಂಟೆ ಇಂದ ಮಹೇಂದ್ರ ಜೈಲೋ ಕಾರ್ ಬುಕ್ ಮಾಡಲಾಗಿತ್ತು. ಇದನ್ನು ಓದಿ..Kannada News: ನಾನೇ ಎಲ್ಲಾ ನಂದೇ ಎಲ್ಲಾ ಎನ್ನುತ್ತಿದ್ದ ಮಮತಾಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ – ಕೇರಳ ಸ್ಟೋರಿ ನಿಷೇದ ಮಾಡಿದಕ್ಕೆ ಏನಾಗಿದೆ ಗೊತ್ತೇ??
ಇವರೆಲ್ಲರೂ ನಿನ್ನೆ ಮಧ್ಯಾಹ್ನ 3:45ಕ್ಕೆ ಕಬ್ಬನ್ ಪಾರ್ಕ್ ನೋಡಿ, ಎಲೆಕ್ಟ್ರಾನಿಕ್ ಸಿಟಿ ಇಂದ ಮನೆಗೆ ಹೋಗುತ್ತಿದ್ದರು. ಆಗ ಭಾನುರೇಖಾ ಕಾರ್ ನ ಹಿಂದೆ ಸೀಟ್ ನಲ್ಲಿ ಕುಳಿತಿದ್ದರು, ಅಂಡರ್ ಪಾಸ್ ಹತ್ತಿರ ಹೋಗುತ್ತಿದ್ದ ಹಾಗೆ, ಕಾರ್ ಹಾಗೆ ಆಫ್ ಆಯಿತು. ಎಷ್ಟೇ ಟ್ರೈ ಮಾಡಿದರು ಕಾರ್ ಸ್ಟಾರ್ಟ್ ಆಗಿಲ್ಲ. ಡೋರ್ ಕೂಡ ಓಪನ್ ಮಾಡಲು ಸಾಧ್ಯವಾಗಿಲ್ಲ. ಆಗ ಕಾರ್ ಗ್ಲಾಸ್ ಒಡೆದು ಹೊರಗೆ ಬಂದು, ಸಹಾಯ ಮಾಡುವಂತೆ ಜನರನ್ನು ಕೇಳಿಕೊಂಡಿದ್ದಾರೆ.
ಈ ಸಮಯದಲ್ಲಿ ಭಾನುರೇಖಾ ನೀರು ಕುಡಿದು, ಪ್ರಜ್ಞೆ ಇಲ್ಲದ ಸ್ಥಿತಿಗೆ ತಲುಪಿದ್ದರು, ಆಗ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಹತ್ತಿರದವರೆ ಸಹಾಯದಿಂದ ರಕ್ಷಣೆ ಸಿಕ್ಕಿತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಆದರೆ ವೈದ್ಯರು ಆಕೆ ಇನ್ನಿಲ್ಲ ಎಂದು ತಿಳಿಸಿದರು. ಈ ರೀತಿ ಆಗಲು ಕಾರಣ ಬಿಬಿಎಂಪಿ ಮತ್ತು ಕಾರ್ ಡ್ರೈವರ್ ಎಂದು ಭಾನುರೇಖಾ ಅಣ್ಣ ಸಂದೀಪ್ ಹೇಳಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ.. Jio Cinema: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್ ಕೊಟ್ಟ ಜಿಯೋ ಸಿನೆಮಾ- ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ. ಏನು ಗೊತ್ತೇ?
Comments are closed.