Free Bus Pass: ಕ್ಷಣಕ್ಕೊಂದು ಆತಂಕ, ಕ್ಷಣಕ್ಕೊಂದು ಹೇಳಿಕೆ, ಕ್ಷಣಕ್ಕೊಂದು ಟ್ವಿಸ್ಟ್ ನಡುವೆ, ಮಹಿಳೆಯರ ಉಚಿತ ಬಸ್ ಪಾಸ್ ಕತೆ ಏನಾಯ್ತು ಗೊತ್ತೇ? ಇವೆಲ್ಲಾ ಬೇಕಿತ್ತಾ?
Free Bus Pass: ಕಾಂಗ್ರೆಸ್ ಸರ್ಕಾರವು ಎಲೆಕ್ಷನ್ ಗೆಲ್ಲುವುದಕ್ಕಿಂತ ಮೊದಲು ರಾಜ್ಯದ ಜನರಿಗೆ ಐದು ಉಚಿತ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು, ಅದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಎನ್ನುವುದು ಒಂದು ಉಚಿತ ಯೋಜನೆ ಆಗಿದೆ. ಇದನ್ನು ಸರ್ಕಾರ ಇನ್ನು ಜಾರಿಗೆ ತಂದಿಲ್ಲ, ಆದರೆ ಈ ಯೋಜನೆ ಬಗ್ಗೆ ಸರ್ಕಾರದ ಮೇಲೆ ಒತ್ತಡ ಇದೆ.

ಈಗಾಗಲೇ ಹಲವು ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಟಿಕೆಟ್ ದುಡ್ಡು ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಹಾಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇಂದು ನಡೆಯಲಿರುವ ಸಿಎಂ ನೇತೃತ್ವದ ಸಭೆಯಲ್ಲಿ ಈ ಯೋಜನೆಯನ್ನು ತಕ್ಷಣವೇ ಜಾರಿಗೆ ತರುವ ಬಗ್ಗೆ ನಿರ್ಧಾರ ಕೈಗೊಂಡು, ಪ್ರಕಟಣೆ ಮಾಡಲಾಗುವುದು ಎಂದು ಮಾಹಿತಿ ಸಿಕ್ಕಿದೆ.. ಇದನ್ನು ಓದಿ..Dk Shivakumar: ಗ್ಯಾರಂಟೀ ಚರ್ಚೆಗಳ ನಡುವೆ, ಮಹತ್ವದ ಹೆಜ್ಜೆ ಇತ್ತ ಡಿ ಕೆ- ಇದು ಕಣ್ರೀ ನಿಜಕ್ಕೂ ಬೇಕಾಗಿರೋದು ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??
ಮೊದಲಿಗೆ ಈ ಯೋಜನೆ ಉಚಿತವಾಗಿ ಸಿಗಲು ಕೆಲವು ಷರತ್ತುಗಳನ್ನು ವಹಿಸಲಾಗುತ್ತದೆ, ಎಲ್ಲಾ ಮಹಿಳೆಯರಿಗು ಉಚಿತ ಪ್ರಯಾಣ ಕೊಡಲು ಸಾಧ್ಯವಿಲ್ಲ, ಫ್ರೀ ಪಾಸ್ ಕೊಡುವುದಕ್ಕೆ ನಷ್ಟ ಆಗುತ್ತದೆ, ಈಗಾಗಲೇ ಸಾರಿಗೆ ನಿಗಮ ಹೇಳಿಕೊಳ್ಳುವಂಥ ಲಾಭವಿಲ್ಲ ಸರ್ಕಾರವೇ ಈ ವೆಚ್ಚ ಭರಿಸಬೇಕು ಎಂದಿದ್ದರು. ಆದರೆ ಈಗ ನಾಲ್ಕು ಸಾರಿಗೆ ನಿಗಮಗಳ ಜೊತೆಗೆ ಸಭೆ ನಡೆಸಿರುವ ಸಚಿವ ರಾಮಲಿಂಗರೆಡ್ಡಿ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ..
“ಪ್ರಣಾಳಿಕೆಯ ಪ್ರಕಾರ ಉಚಿತ ಪ್ರಯಾಣ ಯೋಜನೆಗೆ ಮಹಿಳೆಯರನ್ನು ನಾವು ವರ್ಗಿಕರಣ ಮಾಡಿಲ್ಲ.. ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅರ್ಹತೆ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಬುಧವಾರ ಸಂಪುಟ ಸಭೆಯನ್ನು ಕರೆದಿದ್ದಾರೆ.. ಅದೆಲ್ಲ ನಡೆದ ಬಳಿಕ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಯೋಜನೆಯ ಬಗ್ಗೆ ವೆಚ್ಚದ ವರದಿಯನ್ನು ನಾಳೆ ಸಿಎಂ ಅವರಿಗೆ ತಿಳಿಸುತ್ತೇವೆ..” ಎಂದು ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ. ಇದನ್ನು ಓದಿ..Tamilnadu: ಈ ತಾಯಿ ಕಷ್ಟ ಯಾವುದೇ ತಾಯಿಗೆ ಬೇಡ ದೇವರೇ- ಬಿಟ್ಟಿ ಭಾಗ್ಯ ಕೊಡುವ ತಮಿಳುನಾಡಿನ ನೈಜ ಮುಖ- ಏನಾಗಿದೆ ಗೊತ್ತೇ??
Comments are closed.