Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ

Finance: ಈಗಿನ ಕಾಲದಲ್ಲಿ ಕುಟುಂಬದಲ್ಲಿ ಒಬ್ಬರೇ ದುಡಿದರೆ ಜೀವನ ನಡೆಸುವುದು ಕಷ್ಟ. ಗಂಡ ಹೆಂಡತಿ ಇಬ್ಬರು ಕೂಡ ಕೆಲಸ ಮಾಡಿದರೆ ಅವರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. ಇಬ್ಬರು ಕೆಲಸಕ್ಕೆ ಹೋದರೆ ಮಾತ್ರ ಹಣಕಾಸಿನ ವಿಷಯದಲ್ಲಿ ಭದ್ರತೆ ಸಿಗುತ್ತದೆ. ಈ ಕಾರಣಕ್ಕಾಗಿ ಸರ್ಕಾರವೇ ಈ ಗಂಡ ಹೆಂಡತಿಗೆ ಆರ್ಥಿಕ ಭದ್ರತೆ ಸಿಗಲು ಸಹಾಯ ಮಾಡುತ್ತಿದೆ. ಈ ಯೋಜನೆ ಶುರುವಾಗಿದ್ದು 2004ರಲ್ಲಿ, ಈಗಿನವರೆಗೂ ಈ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದೆ. ಈಗ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ.

couple financial tips in kannada Finance:

ಈ ವರ್ಷ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಬಡ್ಡಿದರವನ್ನು ಕೂಡ ಜಾಸ್ತಿ ಮಾಡಿದೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚು ಲಾಭ ಸಿಗುತ್ತದೆ. ತಿಂಗಳಿಗೆ ನಿಮಗೆ ₹41,000 ರೂಪಾಯಿ ಬಡ್ಡಿ ಮೂಲಕವೇ ಸಿಗಬಹುದು. ಇದು ಹಿರಿಯ ನಾಗರೀಕರ ಉಳಿತಾಯ ಯೋಜನೆ ಆಗಿದೆ. ಇದು ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ ಶುರು ಮಾಡಿರುವ ಯೋಜನೆ ಆಗಿದೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಇದನ್ನು ಓದಿ..ICICI Bank Jobs: ಮತ್ತೆ ಬೇರೆ ರಾಜ್ಯದವರ ಪಾಲು ಎನ್ನಬೇಡಿ, ಈಗಲೇ ಐಸಿಐಸಿಐ ಬ್ಯಾಂಕ್ ಉದ್ಯೋಗಕ್ಕೆ ಹೋಗಿ ಅರ್ಜಿ ಹಾಕಿ. SSLC ಆಗಿದ್ದರೂ ಸಾಕು.

ರಿಟೈರ್ ಆಗುವ ಸಮಯದಲ್ಲಿ ನೀವು ಹಣ ಉಳಿಸಿ, ಪ್ರತಿ ತಿಂಗಳು ಆ ಹಣಕ್ಕೆ ಬಡ್ಡಿ ಪಡೆಯಬಹುದು. ಈ ಯೋಜನೆಯಲ್ಲಿ ನೀವು 5 ವರ್ಷಗಳವರೆಗು ಹಣ ಹೂಡಿಕೆ ಮಾಡಬಹುದು. ಹಾಗೆಯೇ ಮೆಚ್ಯುರಿಟಿ ಸಮಯವನ್ನು 3 ವರ್ಷಗಳ ಕಾಲ ವಿಸ್ತರಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣವನ್ನು ಏಪ್ರಿಲ್ 1ರಿಂದ ₹30ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಹಾಗೂ 8.20% ನಿಮಗೆ ಬಡ್ಡಿ ಮೂಲಕವೇ ಸಿಗುತ್ತದೆ. ವರ್ಷಕ್ಕೆ ನೀವು ₹2,46,000 ರೂಪಾಯಿಗಳನ್ನು ಬಡ್ಡಿ ರೂಪದಲ್ಲೇ ಪಡೆಯಬಹುದು.

ತಿಂಗಳಿಗೆ ₹20,500 ರೂಪಾಯಿ ಪೆನ್ಶನ್ ರೂಪದಲ್ಲೆ ಸಿಗುತ್ತದೆ. ಗಂಡ ಹೆಂಡತಿ ಇಬ್ಬರು ಬೇರೆ ಬೇರೆಯಾಗಿ 60 ಲಕ್ಷ ರೂಪಹಿ ಹೂಡಿಕೆ ಮಾಡಿದರೆ, ₹41,000 ರೂಪಾಯಿ ತಿಂಗಳ ಬಡ್ಡಿಯಾಗಿ ಪೆನ್ಶನ್ ರೀತಿ ಪಡೆಯಬಹುದು. ಐದು ವರ್ಷಗಳಲ್ಲಿ ನಿಮಗೆ ₹24,60,000 ರೂಪಾಯಿ ಬಡ್ಡಿ ಸಿಗುತ್ತದೆ. ಐದು ವರ್ಷಗಳ ನಂತರ ಹೂಡಿಕೆ ಮಾಡಿದ ಪೂರ್ತಿ ಹಣವನ್ನು ವಾಪಸ್ ಪಡೆಯುತ್ತೀರಿ. ಇದನ್ನು ಓದಿ..Watch Movie: ಬಿಗ್ ನ್ಯೂಸ್: ಇನ್ನು ಮುಂದೆ ಸಿನಿಮಾ ಬಿಡುಗಡೆಯಾದ ದಿನವೇ ಮನೆಯಲ್ಲೂ ಕೂತು ನೋಡಬಹುದು. ಹೇಗೆ ಗೊತ್ತೇ??

Comments are closed.