Tirupathi: ತಿರುಪತಿಗೆ ಹೋಗಲು ಟಿಕೆಟ್ ಆನ್ಲೈನ್ ಬುಕ್ ಮಾಡುತ್ತಿದ್ದೀರಾ?? ದೇವಾಲಯದ ಕಡೆ ಇಂದ ಬಂತು ಷಾಕಿಂಗ್ ಮಾಹಿತಿ. ಏನಾಗಿದೆ ಗೊತ್ತೆ??

Tirupathi: ತಿರುಪತಿಗೆ ಹೋಗಿ ಬರುವ ಸಾಕಷ್ಟು ಭಕ್ತಾದಿಗಳಿದ್ದಾರೆ. ಪ್ರತಿ ವರ್ಷ ವಿಶ್ವದ ಹಲವೆಡೆಯಿಂದ ಈ ಸ್ಥಳಕ್ಕೆ ದೇವರ ದರ್ಶನ ಪಡೆಯಲು, ಭಕ್ತರ ಜನಸಾಗರವೇ ಹರಿದು ಬರುತ್ತದೆ. ದೇವರ ದರ್ಶನ ಪಡೆಯುವುದಕ್ಕೆ ಹಲವರು ಆನ್ಲೈನ್ ವೆಬ್ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿಂದ ಎಲ್ಲವನ್ನು ಬುಕ್ ಮಾಡುವುದನ್ನು ಮಾಡುತ್ತಾರೆ. ಟಿಟಿಡಿಯ ಅಧಿಕೃತ ವೆಬ್ಸೈಟ್ ಇದಕ್ಕೆಲ್ಲ ಸಹಾಯ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ವೆಬ್ಸೈಟ್ ಗಳ ಹಾವಳಿ ಹೆಚ್ಚಾಗಿದೆ.

tirupati ticket booking scam temples issues notice Tirupathi:

ಇದೀಗ ಟಿಟಿಡಿ ಗಮನಕ್ಕೆ ಒಂದು ನಕಲಿ ವೆಬ್ಸೈಟ್ ಬಂದಿದ್ದು, ದಯವಿಟ್ಟು ಯಾರು ಈ ವೆಬ್ಸೈಟ್ ಗಳನ್ನು ನಂಬಬೇಡಿ ಎಂಡಿ ಜನರಿಗೆ ಮನವಿ ಮಾಡಿದೆ. ಈ ನಕಲಿ ವೆಬ್ಸೈಟ್ ವಿರುದ್ಧ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲೆ ಮಾಡಲಾಗಿದೆ. ಟಿಟಿಡಿ ಹೆಸರಿನಲ್ಲಿ ಸಿಕ್ಕಿರುವ 41ನೇ ವೆಬ್ಸೈಟ್ ಇದಾಗಿದ್ದು, ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ. ಈ ಹಿಂದೆ 40 ವೆಬ್ಸೈಟ್ ಗಳ ವಿಚಾರದಲ್ಲೂ ಟಿಟಿಡಿ ಇದೇ ರೀತಿ ಕ್ರಮ ತೆಗೆದುಕೊಂಡಿತ್ತು. ಈ ವೆಬ್ಸೈಫಟ್ ವಿರುದ್ಧ ಐಪಿಸಿ ಸೆಕ್ಷನ್ 420,468,471 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಇದನ್ನು ಓದಿ: Mobile Tricks: ನಿಮ್ಮ ಸ್ಮಾರ್ಟ್ ಫೋನ್ ದಿಡೀರ್ ಎಂದು ನೀರಿನಲ್ಲಿ ಬಿದ್ದರೇ, ಈ ಚಿಕ್ಕ ಕೆಲಸ ಮಾಡಿ, ಫೋನ್ ಉಳಿಸಿಕೊಳ್ಳಿ. ಹೇಗೆ ಗೊತ್ತೇ?

ಟಿಟಿಡಿ ಅಧಿಕೃತ ವೆಬ್ಸೈಟ್ ಮಾದರಿಯಲ್ಲೇ ಸ್ವಲ್ಪ ಬದಲಾವಣೆ ಮಾಡಿ, ನಕಲಿ ವೆಬ್ಸೈಟ್ ತಯಾರಿಸಲಾಗಿದೆ, ಇದು https://tirupatibalaji-ap-gov.org/ ನಕಲಿ ವೆಬ್ಸೈಟ್ ಆಗಿದೆ. ಆದರೆ ಟಿಟಿಡಿ ಅಧಿಕೃತ ವೆಬ್ಸೈಟ್ ಇದು. https://tirupatibalaji.ap.gov.in/ ಇದು ಟಿಟಿಡಿ ವೆಬ್ಸೈಟ್ ಆಗಿದ್ದು, ಯಾವುದೇ ವಿಚಾರ ಇದ್ದರು ಈ ವೆಬ್ಸೈಟ್ ಅನ್ನು ಮಾತ್ರ ಸಂಪರ್ಕಿಸಬೇಕು. ವಿಶೇಷ ದರ್ಶನಕ್ಕೆ ಟಿಕೆಟ್ ಬುಕಿಂಗ್, ವಸತಿ ಗೃಹ ಬುಕಿಂಗ್, ಇ ಹುಂಡಿ.. ಈ ಎಲ್ಲಾ ಸೇವೆಗಳು ಕೂಡ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಪಡೆಯಿರಿ ಎಂದು ಟಿಟಿಡಿ ತಿಳಿಸಿದೆ.

ಟಿಟಿಡಿಯ ಮೊಬೈಲ್ ಆಪ್ ಕೂಡ ಇದೆ, ಮೇಲೆ ತಿಳಿಸಿರುವ ಎಲ್ಲಾ ಸೇವೆಗಳನ್ನು ಆ ಅಪ್ಲಿಕೇಶನ್ ಮೂಲಕ ಕೂಡ ಪಡೆಯಬಹುದು. ದೇವಸ್ಥಾನದಲ್ಲಿ ಲಡ್ಡು ವಿತರಣೆ ಹಾಗೂ ಇನ್ನಿತರ ವಿಚಾರಗಳಲ್ಲಿ ನಡೆಯುವ ಹಗರಣ, ಮೋಸವನ್ನು ತಪ್ಪಿಸಲು, ವೆಬ್ಸೈಟ್ ಮತ್ತು ಅಪ್ಲಿಕೇಶನ್ ಶುರು ಮಾಡಲಾಯಿತು. ಆದರೆ ಈಗ ಕಿಡಿಗೇಡಿಗಳು ನಕಲಿ ವೆಬ್ಸೈಟ್ ಗಳನ್ನು ಸಹ ಶುರು ಮಾಡುತ್ತಿದ್ದಾರೆ. ಇದರಿಂದ ಭಕ್ತರು ಹುಷಾರಾಗಿರಬೇಕು.

ಇದನ್ನು ಓದಿ: Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.