Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

Car Safety Tips: ಮಳೆಗಾಲದಲ್ಲಿ ಕಾರ್ ಡ್ರೈವ್ ಮಾಡುವುದು ಒಂದು ರೀತಿ ಚಾಲೆಂಜ್ ಎನ್ನಬಹುದು. ಕಾರ್ ಡ್ರೈವ್ ಮಾಡುವಾಗ ಮಳೆಯಲ್ಲಿ ಸಿಲುಕಿಕೊಳ್ಳಬಹುದು. ಆದರೆ ತುಂತುರು ಮಳೆ ಬರುವಾಗ ಕಾರ್ ಓಡಿಸುವುದು ನೋವು ಮತ್ತು ಬೇಸರ ಎರಡು ಆಗಿರುತ್ತದೆ, ಕಡಿಮೆ ಗೋಚರ ಇರುವುದರಿಂದ ಅಪಾಯದ ಸಂಭವ ಕೂಡ ಹೆಚ್ಚು. ಈ ರೀತಿ ಆದಾಗ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು, ಕಾರ್ ನಲ್ಲಿ ಕೆಲವು ಸೆಟ್ಟಿಂಗ್ ಗಳಿರುತ್ತವೆ (Car Safety Tips).. ಇದನ್ನು ಅರ್ಥಮಾಡಿಕೊಂಡು ಅಪಾಯ ಆಗುವುದನ್ನು ತಪ್ಪಿಸಬಹುದು, ಆ ಸೆಟ್ಟಿಂಗ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಅಪಾಯದ ಲೈಟ್ಸ್ :- ಮಳೆ ವೇಕೆ ಕಾರ್ ನಲ್ಲಿ ಅಪಾಯದ ಲೈಟ್ಸ್ ಗಳನ್ನು ಆನ್ ಮಾಡಿ, ಇದರಿಂದಾಗಿ ಜನರು ಸುಲಭವಾಗಿ ನಿಮ್ಮ ಕಾರ್ ಅನ್ನು ನೋಡಬಹುದು. ಮಳೆ ವೇಳೆ ನಿಮ್ಮ ಕಾರ್ ಅನ್ನು ದೂರದಿಂದಲೂ ಗೋಚರಿಸುತ್ತದೆ, ಅದರಿಂದ ನಿಮ್ಮ ಕಾರ್ ಗೆ ಹಿಂದಿನಿಂದ ಆಕ್ಸಿಡೆಂಟ್ ಆಗುವುದಿಲ್ಲ (Car Safety Tips). ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಪಾರ್ಕಿಂಗ್ ಲೈಟ್ಸ್ :- ಮಳೆ ಜಾಸ್ತಿ ಇದ್ದಾಗ, ಕಾರ್ ನ ಪಾರ್ಕಿಂಗ್ ಲೈಟ್ಸ್ ಗಳನ್ನು ಆನ್ ಮಾಡಿ.. ಹೆಚ್ಚಿನ ಮಳೆ ಇದ್ದಾಗ, ಲೋ ಬೀಮ್ ನಲ್ಲಿ ಹೆಡ್ ಲೈಟ್ ಗಳನ್ನು ಆನ್ ಮಾಡಿ. ಆಗ ನಿಮ್ಮ ಕಾರ್ ನ ಗೋಚರತೆ ಹೆಚ್ಚಾಗುತ್ತದೆ. ಜೊತೆಗೆ ನೀವು ರಸ್ತೆಯನ್ನು ಸುಲಭವಾಗಿ ನೋಡಬಹುದು (Car Safety Tips).

ಎಸಿ ಸೆಟ್ಟಿಂಗ್ :- AC ಬ್ಲೋ ವಿಂಡ್ ಶೀಲ್ಡ್ ನಲ್ಲಿ ಇಟ್ಟು, ಅದನ್ನು 3 ಅಥವಾ 4 ಸ್ಪೀಡ್ ನಲ್ಲಿ ಚಲಿಸಿ.. ಇದರಿಂದ ನಿಮ್ಮ ವಿಂಡ್ ಶೀಲ್ಡ್ ಬ್ಲರ್ ಆಗುವುದಿಲ್ಲ. ಹಾಗೆಯೇ ರಸ್ತೆಯ ಜೊತೆಗೆ ಮುಂಭಾಗದ ಟ್ರಾಫಿಕ್ ಅನ್ನು ಕೂಡ ಚೆನ್ನಾಗಿ ಕಾಣಿಸುತ್ತದೆ (Car Safety Tips). ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

ಡಿಫೋಗರ್ :- ಮಳೆ ವೇಳೆ ಡಿಫೊಗರ್ ಬಳಸಿ. ಇದರಿಂದ ಹಿಂದಿನ ವಿಂಡ್ ಶೀಲ್ಡ್ ನಲ್ಲಿ ಮಂಜು ಇರುವುದಿಲ್ಲ, ಹಾಗೆಯೇ ನೀವು ಕಾರ್ ಡ್ರೈವ್ ಮಾಡಲು ಸುಲಭವಾಗುತ್ತದೆ. ಟ್ರಾಫಿಕ್ ಕೂಡ ಚೆನ್ನಾಗಿ ಕಾಣಿಸುತ್ತದೆ.. ಕಾರ್ ಡ್ರೈವ್ ಮಾಡುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ (Car Safety Tips).

ವೈಪರ್ ಸ್ಪೀಡ್ :- ಹೆಚ್ಚು ಮಳೆ ಇದ್ದಾಗ, ವೈಪರ್ ಸ್ಪೀಡ್ ಮ್ಯಾಕ್ಸಿಮಮ್ ಇಡಿ, ಇದರಿಂದ ವಿಂಡ್ ಶೀಲ್ಡ್ ಮೇಲೆ ಬೀಳುವ ಮಳೆ ನೀರು ಬೇಗ ಹಾದು ಹೋಗುತ್ತದೆ (Car Safety Tips). ಮಳೆಯ ವೇಗಕ್ಕೆ ವೈಪರ್ ನ ವೇಗ ಅಡ್ಜಸ್ಟ್ ಮಾಡುವುದು ಕೂಡ ಒಳ್ಳೆಯದೇ. ಮಳೆಗಾಲದಲ್ಲಿ ವೈಪರ್ ಬ್ಲೇಡ್ ಗಳನ್ನು ಬದಲಾಯಿಸುವುದು ಒಳ್ಳೆಯದು. ಇದನ್ನು ಓದಿ..Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.