Shivaraj Kumar: ಸುದೀಪ್ ರವರ ಬಳಿ ಮಾತನಾಡುವುದಿಲ್ಲ, ಖಡಕ್ ಆಗಿಯೇ ಹೇಳಿದ ಶಿವಣ್ಣ- ಈ ರೀತಿ ಹೇಳಿದ್ಯಾಕೆ ಗೊತ್ತೆ?

Shivaraj Kumar: ಸುದೀಪ್ ರವರ ಬಳಿ ಮಾತನಾಡುವುದಿಲ್ಲ, ಖಡಕ್ ಆಗಿಯೇ ಹೇಳಿದ ಶಿವಣ್ಣ- ಈ ರೀತಿ ಹೇಳಿದ್ಯಾಕೆ ಗೊತ್ತೆ?

Shivaraj Kumar: ಈಗ ಕನ್ನಡ ಚಿತ್ರರಂಗದಲ್ಲಿ ಈಗ ಬಹಳ ಸುದ್ದಿಯಾಗುತ್ತಿರುವ ವಿಷಯ ಕಿಚ್ಚ ಸುದೀಪ್ (Sudeep) ಅವರು ಮತ್ತು ನಿರ್ಮಾಪಕ ಎಂ.ಎನ್.ಕುಮಾರ್ (MN Kumar) ಅವರ ವಿಚಾರ. 20 ವರ್ಷಗಳ ಹಿಂದೆ ಕಿಚ್ಚ ಸುದೀಪ್ (Sudeep) ಅವರು ಸಿನಿಮಾ ಮಾಡುವುದಾಗಿ ತಮ್ಮಿಂದ ಹಣ ಪಡೆದು ತಮಗೆ ಮೋಸ ಮಾಡಿದ್ದಾರೆ ಎಂದು ನಿರ್ಮಾಪಕ ಆನಂದ್ ಕುಮಾರ್ ಆರೋಪ ಮಾಡಿದ್ದಾರೆ. ಇತ್ತ ಸುದೀಪ್ ಅವರು ಈ ಬಗ್ಗೆ ನಿರ್ಧಾರ ಮಾಡಿದ್ದಾರೆ.

ತಾವು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳುವುದಾಗಿ ಹೇಳಿರುವ ಸುದೀಪ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ, ಇತ್ತ ನಿರ್ಮಾಪಕ ಎಂ.ಎನ್.ಕುಮಾರ್ ಈ ವಿಚಾರವನ್ನು ಬಗೆಹರಿಸಿಕೊಡಬೇಕು ಎಂದು ಚಂದನವನದ ಹಿರಿಯ ಕಲಾವಿದರಾದ ರವಿಚಂದ್ರನ್ (Ravichandran) ಅವರು ಮತ್ತು ದೊಡ್ಮನೆ ಮಗ ಶಿವರಾಜ್ ಕುಮಾರ್ (Shivarajkumar) ಅವರು ಭೇಟಿ ಮಾಡಿ, ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರವಿಚಂದ್ರನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಎರಡು ಕರೆ ಮಾತನಾಡಬೇಕು ಏನೇನಾಗಿದೆ ಅಂತ ಕೇಳಬೇಕು.. ಇದನ್ನು ಓದಿ..Sonu Gowda: ಸ್ನೇಹಿತರ ಜೊತೆ ಶಾಪಿಂಗ್ ಗೆ ಹೋದ ಸೋನು ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಈ ಚಿಟ್ಟೆಯ ಬಟ್ಟೆಗೆ ಖರ್ಚು.

ಸುದೀಪ್ ಹತ್ರ ನಾನೇ ಹೋಗಿ ಮಾತಾಡ್ತೀನಿ, ಆಮೇಲೆ ನಿರ್ಧಾರ ಮಾಡೋದು, ಆನಂದ್ ತಪ್ಪಿದ್ರೆ ಅವನಿಗೆ ಬೈತೀನಿ. ನನ್ನ ಮಾತಿಗೆ ಇಬ್ಬರು ಬದ್ಧರಾಗಿರಬೇಕು. ಏನಾಗಿದೆ ಅನ್ನೋದನ್ನು ಸರಿಯಾಗಿ ತಿಳಿದುಕೊಂಡು ಆಮೇಲೆ ಇದನ್ನೆಲ್ಲ ಕೂತು ಪರಿಹಾರ ಮಾಡಬೇಕು ಮೊದಲು ಎಲ್ಲವೂ ಕೂಲ್ ಆಗಬೇಕು, ನನ್ನ ಮಗನ ಮೇಲೆ ಆರೋಪ ಮಾಡ್ತಿದ್ದಾರೆ ನಾನು ಸುಮ್ಮನೆ ಬಿಡೋದಿಲ್ಲ ಎಂದು ಹೇಳಿದ್ದಾರೆ ರವಿಚಂದ್ರನ್ ಅವರು. ಇನ್ನು ಶಿವರಾಜ್ ಕುಮಾರ್ (Shivarajkumar) ಅವರು ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಸುದೀಪ್ ಜೊತೆ ಮಾತನಾದಲ್ಲ ಎಂದಿದ್ದಾರೆ.

“ಅವರಿಬ್ಬರ ನಡುವೆ ಏನಾಗಿದೆ ಅಂತ ಅವರಿಗೆ ಮಾತ್ರ ಗೊತ್ತಿರುತ್ತೆ. ಕಲಾವಿದರು ಮತ್ತು ನಿರ್ಮಾಪಕರು ಇಬ್ಬರು ಚಿತ್ರರಂಗಕ್ಕೆ ಪಿಲ್ಲರ್ ಗಳ ಹಾಗೆ, ರವಿಚಂದ್ರನ್ ಅವರ ತಂದೆಯವರನ್ನ ಅಪ್ಪಾಜಿ ಅವರು ಕೂಡ ಸಾಹುಕಾರರು ಅಂತ ಹೇಳ್ತಿದ್ರು..ರವಿ ಸರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 40 ವರ್ಷ ಆಗಿದೆ, ಅವರು ಹೇಳೋ ಮಾತಿನ ಮೇಲೆ ಎಲ್ಲವೂ ಇರುತ್ತದೆ. ಈ ಲೆಕ್ಕಾಚಾರದ ಬಗ್ಗೆ ನಾನು ಮಾತಾಡೋಕೆ ಆಗಲ್ಲ, ಒಬ್ಬ ಕಲಾವಿದನಿಗೆ ಗೌರವ ಕೊಡಬೇಕು, ಲೆಕ್ಕಾಚಾರಗಳನ್ನ ಬಿಟ್ಟು ಬೇರೆ ಎಲ್ಲವನ್ನ ರವಿ ಸರ್ ಜೊತೆ ಮಾತಾಡ್ತೀನಿ. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??

ಒಬ್ಬ ನಟನಾಗಿ ಸುದೀಪ್ ಅವರ ಜೊತೆ ಇದರ ಬಗ್ಗೆ ಮಾತಾಡೋಕೆ ಆಗಲ್ಲ. ರವಿ ಸರ್ ಜೊತೆ ನಾನು ಈ ವಿಷಯದ ಬಗ್ಗೆ ಇನ್ನೂ ಮಾತಾಡಿಲ್ಲ. ಅವರ ಜೊತೆ ಮಾತನಾಡಿ ಬಗೆಹರಿಸಬೇಕು. ಅಪ್ಪಾಜಿ ಯಾವಾಗಲೂ ಹೇಳ್ತಾ ಇದ್ದಿದ್ದು ಒಂದೇ ಮಾತು, ಚಿತ್ರರಂಗ ಅಂದ್ರೆ ಒಂದು ಕುಟುಂಬ ಇದ್ದ ಹಾಗೆ ಅಂತ..”ಎಂದು ಶಿವರಾಜ್ ಕುಮಾರ್ ಅವರು (Shivarajkumar) ಹೇಳಿದ್ದಾರೆ. ಕನ್ನಡದ ಹಿರಿಯ ಕಲಾವಿದರು ಈ ಸಮಸ್ಯೆಯನ್ನ ಹೇಗೆ ಬಗೆಹರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.