Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

Avoid Tax Tricks: ಆದಾಯ ತೆರಿಗೆ ಪಾವತಿ ಮಾಡುವುದಕ್ಕೆ ಜುಲೈ 30 ಕೊನೆಯ ದಿನಾಂಕ ಆಗಿದೆ. ಅಷ್ಟರ ಒಳಗೆ ನೀವು ಐಟಿ ರಿಟರ್ನ್ಸ್ ಸಲ್ಲಿಸಬೇಕು. ಈ ಬವೇಳೆ ಅನೇಕ ಜನರು ತೆರಿಗೆ ಕಟ್ಟುವ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಪ್ರಯತ್ನ ಪಡುತ್ತಾರೆ. ಟ್ಯಾಕ್ಸ್ ಕಡಿಮೆ ಮಾಡುವುದಕ್ಕೆ ಕೆಲವು ಮಾರ್ಗಗಳು ಕೂಡ ಇದೆ.. ಬೇರೆ ಬೇರೆ ರೀತಿ ಕಡಿತಗಳು ಮತ್ತು ವಿನಾಯ್ತಿ ಸೌಲಭ್ಯಗಳು ಸಹ ಲಭ್ಯವಿದೆ. ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ 10 ಲಕ್ಷಕ್ಕಿಂತ ಜಾಸ್ತಿಯಾದರೆ, ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಇಂದು ನಿಮಗೆ ಕೆಲವು ಟ್ರಿಕ್ಸ್ ಗಳನ್ನು ತಿಳಿಸಿಕೊಡುತ್ತೇವೆ.. ಅದನ್ನು ಪಾಲಿಸುವ ಮೂಲಕ ತೆರಿಗೆ ಕಟ್ಟುವ ಹಣವನ್ನು ಕಡಿಮೆ ಮಾಡಬಹುದು (Avoid Tax Tricks).

*1.50 ಸಾವಿರ ಕಡಿತ :- ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ 50 ಸಾವಿರ ರೂಪಾಯಿಯವರೆಗೂ ಟ್ಯಾಕ್ಸ್ ಡಿಸ್ಕೌಂಟ್ ನೀಡಲಾಗುತ್ತದೆ. ಸಂಬಳ ಪಡೆಯುವ ಎಲ್ಲರೂ ಕೂಡ ಈ ಸೌಲಭ್ಯ ಪಡೆಯಬಹುದು. ಖರ್ಚಿನ ಮೊತ್ತ, ಹೂಡಿಕೆ ಇದೆಲ್ಲವನ್ನು ಬಿಟ್ಟು ಒಟ್ಟಾರೆ ನಿಮ್ಮ ತೆರಿಗೆಯನ್ನು ಕಡಿಮೆ ಮಾಡುತ್ತದೆ.
*ಸೆಕ್ಷನ್ 80ಸಿ ಅಡಿಯಲ್ಲಿ ಸುಮಾರು 1.50 ಲಕ್ಷ ರೂಪಾಯಿಯವರೆಗು ತೆರಿಗೆ ಪ್ರಯೋಜನ ನೀಡಲಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) (Avoid Tax Tricks). ಇದನ್ನು ಓದಿ..Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

ಮಕ್ಕಳ ಟ್ಯೂಶನ್ ಫೀಸ್, ಹೋಮ್ ಲೋನ್ ಇದಕ್ಕೆಲ್ಲ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತ ಪ್ರಯೋಜನ ಒದಗಿಸಲಾಗುತ್ತದೆ. ಇದನ್ನು ನೀವು ಬಳಸಿಕೊಳ್ಳಬಹಉದು.
*ಸೆಕ್ಷನ್ 80ಡಿ :- ನಿಮ್ಮ ಲೈಫ್ ಇನ್ಷುರೆನ್ಸ್, ಹೆಲ್ತ್ ಇನ್ಷುರೆನ್ಸ್ ಇದರ ಹಣವನ್ನು ಸೆಕ್ಷನ್ 80ಡಿ ಅಡಿಯಲ್ಲಿ ಕಡಿಮೆ ಮಾಡಬಹುದು. ಆದಾಯ ಬರುವ ವ್ಯಕ್ತಿ, ಅವರ ಪತ್ನಿ ಮತ್ತು ಕುಟುಂಬದ ಹೆಲ್ತ್ ಇನ್ಷುರೆನ್ಸ್ ಮೇಲೆ ನಿಮಗೆ ₹25,000 ತೆರಿಗೆ ಕಡಿತ ಸಿಗುತ್ತದೆ. ಸೀನಿಯರ್ ಸಿಟಿಜನ್ ಗಳಿಗೆ ₹50,000ವರೆಗು ತೆರಿಗೆ ಕಡಿತ ಸಿಗುತ್ತದೆ (Avoid Tax Tricks).

*ಸೆಕ್ಷನ್ 80 ಸಿಸಿಡಿ(1ಬಿ) :- ರಾಷ್ಟ್ರೀಯ ಪೆನ್ಶನ್ ಯೋಜನೆ (NPS) ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವವರಿಗೂ, ಸೆಕ್ಷನ್ 80ಸಿಸಿಡಿ(ಬಿ1) ಅಡಿಯಲ್ಲಿ ತೆರಿಗೆ ಪ್ರಯೋಜನ ಸಿಗುತ್ತದೆ.. ಇದಕ್ಕೂ ಕೂಡ 50 ಸಾವಿರ ರೂಪಾಯಿಯವರೆಗು ತೆರಿಗೆ ಕಡಿತ ಪಡೆಯಬಹುದು (Avoid Tax Tricks).
*ಸೆಕ್ಷನ್ 24(ಬಿ) :- ಈ ಸೆಕ್ಷನ್ ಅಡಿಯಲ್ಲಿ ಹೋಮ್ ಲೋನ್ ಪಡೆಯುವವರಿಗೆ ತೆರಿಗೆ ಕಡಿತ ನೀಡುತ್ತದೆ. ಒಬ್ಬ ವ್ಯಕ್ತಿಯ ಬಳಿ ಆಸ್ತಿ ಇತ್ತು, ಅದರ ಮೇಲೆ 2ಲಕ್ಷದವರೆಗು ತೆರಿಗೆ ಪ್ರಯೋಜನ ಪಡೆಯುತ್ತೀರಿ. ಈ ಎಲ್ಲಾ ಟ್ರಿಕ್ಸ್ ಗಳನ್ನು ಬಳಸಿ ನೀವು ತೆರಿಗೆ ಪ್ರಯೋಜನ ಪಡೆಯಬಹುದು. ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

ಅದು ಹೇಗೆ ಎಂದು ಉದಾಹರಣೆ ಕೊಡುವುದಾದರೆ.. ಒಬ್ಬ ವ್ಯಕ್ತಿಯ ಒಟ್ಟು ಸಂಬಳ ₹10,00,000 ಎಂದುಕೊಂಡರೆ, ಇದರಲ್ಲಿ ಸ್ಟ್ಯಾಂಡರ್ಡ್ ಕಡಿತ ₹50,000 ರೂಪಾಯಿ, ಹೋಮ್ ಲೋನ್ ಬಡ್ಡಿ ₹2,00,000ರೂಪಾಯಿ, ಒಟ್ಟು ಆದಾಯ ₹7,50,000 ರೂಪಾಯಿ. ಸೆಕ್ಷನ್ 80ಸಿ ಅಡಿಯಲ್ಲಿ ಕಡಿತವಾಗುವುದು ₹1,50,000ರೂಪಾಯಿಗಳು, ಎನ್ ಪಿಎಸ್ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಕಡಿತ ಆಗುವುದು ₹50,000 ರೂಪಾಯಿಗಳು,
ಸೆಕ್ಷನ್ 80ಡಿ ಅಡಿಯಲ್ಲಿ ₹50,000 ರೂಪಾಯಿಗಳು, ಒಟ್ಟಾರೆಯಾಗಿ ತೆರಿಗೆಗೆ ಅರ್ಹತೆ ಪಡೆಯುವ ಆದಾಯ ₹5 ಲಕ್ಷ ರೂಪಾಯಿಗಳು. ತೆರಿಗೆ ದರ 5% ಎಂದರೆ ₹12,500 ರೂಪಾಯಿ ಆಗುತ್ತದೆ (Avoid Tax Tricks). ಸೆಕ್ಷನ್ 87ಎ ಅಡಿಯಲ್ಲಿ ಸಿಗುವ ಡಿಸ್ಕೌಂಟ್ ₹12,500 ರೂಪಾಯಿಗಳು. ನೀವು ತೆರಿಗೆ ಕಟ್ಟಬೇಕಾದ ಹಣ ಸೊನ್ನೆ ಆಗಿರುತ್ತದೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.