ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ITR: 2022-23ನೇ ವರ್ಷದ ತೆರಿಗೆ ಪಾವತಿ ITR ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ ಆಗಿದೆ. ಈ ದಿನಕ್ಕಿಂತ ಮೊದಲು ಐಟಿಆರ್ ಸಲ್ಲಿಸಿದರೆ ನಿಮಗೆ ಯಾವುದೇ ನಷ್ಟ ಆಗುವುದಿಲ್ಲ. ಜುಲೈ 31ರ ನಂತರ ನೀವು ಹಣಪಾವತಿ ಮಾಡುವುದಾದರೆ, ಬಿಲೇಟೆಡ್ ರಿಟರ್ನ್ಸ್ ಕಟ್ಟಬೇಕಾಗುತ್ತದೆ . ಬಿಲೇಟೆಡ್ ರಿಟರ್ನ್ಸ್ ಕಟ್ಟುವುದಕ್ಕೆ ಡಿಸೆಂಬರ್ 31ರವರೆಗೂ ಅವಕಾಶ ಇರುತ್ತದೆ.. ಜುಲೈ 31ರ ಒಳಗೆ ನೀವು ITR ಫೈಲಿಂಗ್ ಮಾಡಲಿಲ್ಲ ಎಂದರೆ, ಈ ನಷ್ಟಗಳನ್ನು ಅನುಭವಿಸುತ್ತೀರಿ..

ದಂಡ ಪಾವತಿ :- ದಂಡ ಕಟ್ಟುವುದು ನಿಮ್ಮ ಆದಾಯದ ಮೇಲೆ ಅವಲಂಬಿಸಿರುತ್ತದೆ. ₹5ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು ₹5000 ದಂಡ ಪಾವತಿ ಮಾಡಬೇಕು, ₹5ಲಕ್ಷದ ಒಳಗೆ ಇರುವವರು ₹1000 ದಂಡ ಪಾವತಿ ಮಾಡಬೇಕು. ಈ ಸಮಯಕ್ಕೆ ಐಟಿಆರ್ ಫೈಲಿಂಗ್ ಮಾಡಿಲ್ಲ ಎಂದರೆ ನೀವು ತೆರಿಗೆ ವಿನಾಯಿತಿಯನ್ನು ಕಳೆದುಕೊಳ್ಳಬಹುದು. ಇದರಿಂದ ಟ್ಯಾಕ್ಸ್ ಕಟ್ಟುವ ಹಣ ಹೆಚ್ಚಾಗಬಹುದು. 2023ರ ಡಿಸೆಂಬರ್ 31ರ ನಂತರ ಐಟಿಆರ್ ಕಟ್ಟಿದರೆ, ₹10,000ಕ್ಕಿಂತ ಹೆಚ್ಚು ದಂಡ ಬೀಳುತ್ತದೆ. ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

ಲೇಟ್ ಫೈಲಿಂಗ್ ಮೇಲೆ ದಂಡ :- ಜುಲೈ 31ರ ಒಳಗೆ ಐಟಿಆರ್ (ITR) ಸಲ್ಲಿಸದೆ ಹೋದರೆ, ಐಟಿಆರ್ ಸಲ್ಲಿಸುವವರೆಗೂ ಪ್ರತಿ ತಿಂಗಳು 1%ಹೆಚ್ಚು ಬಡ್ಡಿ ಕಟ್ಟಲಾಗುತ್ತದೆ. ಡಿಸೆಂಬರ್ 31 ನಂತರ ಐಟಿಆರ್ ಕಟ್ಟುವವರು ಅಪ್ಡೇಟ್ ಆಗಿರುವ ಐಟಿಆರ್ (ITR) ಅಂದರೆ 2023-24ನೇ ಸಾಲಿನ ಐಟಿಆರ್ ಸಲ್ಲಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸುವವರು ಕಡಿಮೆ ಆದಾಯ ಸಲ್ಲಿಸಿದ್ದರೆ 50% ದಂಡ ವಿಧಿಸಲಾಗುತ್ತದೆ. ನಿಮ್ಮ ಆದಾಯ ತಪ್ಪು ಎಂದರೆ 200% ದಂಡ ಹಾಕಬಹುದು. ಒಂದು ವೇಳೆ ನೀವು ದಂಡ ಕಟ್ಟದೆ ಹೋದರೆ, ಬಾಕಿ ಇರುವ ತೆರಿಗೆ ಮೇಲೆ ಪ್ರಾಸಿಕ್ಯೂಷನ್ ಶುರು ಮಾಡಬಹುದು. ಇದರಿಂದ 3 ತಿಂಗಳಿನಿಂದ 7 ವರ್ಷಗಳವರೆಗು ಜೈಲು ಶಿಕ್ಷೆ ವಿಧಿಸಬಹುದು.

ಹೆಚ್ಚು ಪ್ರಯೋಜನವಿಲ್ಲ :- ಮಾರ್ಚ್ 31ರ ನಂತರ ಲೇಟ್ ಆದರೆ, ವೇತನ ಪಡೆಯುವವರು ಹೊಸ ತೆರಿಗೆ ಪದ್ಧತಿಯನ್ನು ಸೆಲೆಕ್ಟ್ ಮಾಡಲು ಆಗೋದಿಲ್ಲ. ಐಟಿಆರ್ ಲೇಟ್ ಆಗಿ ಫೈಲ್ ಮಾಡಿದರೆ, ದಂಡ ಕಟ್ಟಬೇಕಾಗುತ್ತದೆ. ಫೆಬ್ರವರಿ 1ರಂದು ಬಜೆಟ್ ಮಂಡಿಸಿದಾಗ, ಹಣಕಾಸು ಸಚಿವರು ಈಗಿನ ಹೊಸ ತೆರಿಗೆ ಪದ್ಧತಿಯಲ್ಲಿ 7ಲಕ್ಷದವರೆಗು ತೆರಿಗೆ ಮುಕ್ತ ಗೊಳಿಸಿದ್ದಾರೆ.. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ರೀಫಂಡ್ ತಡವಾಗುತ್ತದೆ :- ಐಟಿಆರ್ (ITR) ಫೈಲ್ ಮಾಡುವುದು ಲೇಟ್ ಆದರೆ ಅದರಿಂದ ಆಗುವ ಮತ್ತೊಂದು ತೊಂದರೆ ಏನು ಎಂದರೆ, ನಿಮ್ಮ ತೆರಿಗೆ ಮರುಪಾವತಿ ಕೂಡ ಲೇಟ್ ಆಗುತ್ತದೆ.. ಐಟಿಆರ್ ಫೈಲಿಂಗ್ ಲೇಟ್ ಆದರೆ, ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತೀರಿ..ವಿಚಾರಣೆಗಳನ್ನು ಎದುರಿಸಬೇಕಾಗಬಹುದು. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

Comments are closed.