HDFC ಅಲ್ಲಿ ವೈಯಕ್ತಿಕ ಲೋನ್ ಪಡೆಯಿರಿ. HDFC Bank Personal Loan in Kannada

Below is the complete details of HDFC Personal Loan- Loan Interest rates, Loan eligibility and documents required to get a Personal loan Explained in Kannada.

HDFC Bank Personal Loan: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನಿಯಲ್ಲಿ ನಾವು ನಿಮಗೆ HDFC Bank Personal Loan ಪಡೆದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ತಿಳಿಸಲು ಹೊರಟಿದ್ದೇವೆ. ಒಂದು ವೇಳೆ ನಿಮ್ಮನ್ನು ಕೂಡ ಯಾರಾದರೂ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಯೋಜನೆ ಹಾಕಿಕೊಂಡಿದ್ದರೆ ಅವರಿಗೆ ಈ ಲೇಖನಿಯ ಮಾಹಿತಿ ಖಂಡಿತವಾಗಿ ಉಪಯುಕ್ತಕಾರಿಯಾಗಲಿದೆ.

Below is the complete details of HDFC Personal Loan- Loan Interest rates, Loan eligibility and documents required to get a Personal loan Explained in Kannada.

HDFC Bank Personal Loan ಪಡೆಯಲು ಇರಬೇಕಾದ ಅರ್ಹತೆಗಳು- Eligibility to get Personal Loan

  1. ಮೊದಲಿಗೆ ವಯಸ್ಸಿನ ಅರ್ಹತೆಯ ಬಗ್ಗೆ ಮಾತನಾಡುವುದಾದರೆ 21ರಿಂದ ಅರವತ್ತು ವರ್ಷಗಳ ವಯಸ್ಸಿನ ನಡುವೆ ಇರಬೇಕು.
  2. ಒಂದು ವೇಳೆ ನೀವು ಖಾಸಗಿ ಅಥವಾ ಸರ್ಕಾರಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಬರುತ್ತಿದ್ದರೆ ನೀವು ಈ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು.
  3. ಈಗಾಗಲೇ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರಬೇಕು ಹಾಗೂ ಈಗ ಕೆಲಸ ಮಾಡುತ್ತಿರುವಂತಹ ಕಂಪನಿಯಲ್ಲಿ ಕನಿಷ್ಠಪಕ್ಷ ಒಂದು ವರ್ಷದಿಂದ ಕೆಲಸ ಮಾಡುತ್ತಿರಬೇಕು. ಹೀಗಿದ್ದಲ್ಲಿ ಮಾತ್ರ ಲೋನ್ ಪಡೆದುಕೊಳ್ಳುವುದಕ್ಕೆ ನೀವು ಅರ್ಹತೆಯನ್ನು ಹೊಂದಿರುತ್ತೀರಿ.
  4. ಲೋನ್ಗಾಗಿ ಅಪ್ಲೈ ಮಾಡುತ್ತಿರುವಂತಹ ವ್ಯಕ್ತಿ ಆದಾಯ ಪ್ರತಿ ತಿಂಗಳಿಗೆ ಕನಿಷ್ಠ ಪಕ್ಷ ೨೫ ಸಾವಿರ ರೂಪಾಯಿ ಆಗಿರಬೇಕು. ಹೀಗಿದ್ದಲ್ಲಿ ಮಾತ್ರ ಲೋನ್ ಪಡೆದುಕೊಳ್ಳಲು ಅಪ್ಲೈ ಮಾಡಬಹುದಾಗಿದೆ.
ಇದನ್ನು ಕೂಡ ಓದಿ: Instant Loan: ನಿಂತಲ್ಲೇ ಲೋನ್ ಬೇಕು ಎರಡು ನಿಮಿಷದಲ್ಲಿ ಲೋನ್ ಪಡೆಯೋದು ಹೇಗೆ. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

HDFC Bank Personal Loan ವಿವರ- More details about Loan

  1. HDFC ಬ್ಯಾಂಕ್ ಲೋನ್ ಪಡೆದುಕೊಳ್ಳಲು ಇಚ್ಛಿಸುವವರ ಅರ್ಹತೆಗಳನ್ನು ಪರೀಕ್ಷಿಸಿದ ನಂತರವಷ್ಟೇ, ಅವರ ಲೋನ್ ಹಣವನ್ನು ಅಪ್ರೂವ್ ಮಾಡುತ್ತದೆ.
  2. ಸಾಮಾನ್ಯವಾಗಿ ಮೊದಲ ಬಾರಿಗೆ ಲೋನ್ ಪಡೆದುಕೊಳ್ಳುತ್ತಿರುವಂತಹ ಗ್ರಾಹಕರಿಗೆ ಕನಿಷ್ಠ ಪಕ್ಷ ನಾಲ್ಕು ಗಂಟೆಗಳ ಕಾಲ ಲೋನ್ ಪಡೆದುಕೊಳ್ಳುವುದಕ್ಕೆ ಕಾಯಬೇಕಾಗುತ್ತದೆ. Pre Approved ಆಗಿರುವಂತಹ ಗ್ರಾಹಕರಿಗೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಲೋನ್ ಹಣವನ್ನು ಅನುಮೋದನೆ ಮಾಡಲಾಗುತ್ತದೆ.
  3. ಒಂದು ವೇಳೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಲು ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಿದ್ರೆ ಒಂದು ದಿನಗಳ ಒಳಗಾಗಿ ನಿಮ್ಮ ಲೋನ್ ಹಣವನ್ನು ನೀವು ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕ ಕೂಡ ಅಪ್ಲೈ ಮಾಡಬಹುದಾಗಿದೆ.
  4. ಪರ್ಸನಲ್ ಲೋನ್ ಜೊತೆಗೆ ನೀವು 8 ಲಕ್ಷ ರೂಪಾಯಿಗಳ ಪರ್ಸನಲ್ ಆ’ ಕ್ಸಿಡೆಂಟ್ ಕವರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಒಂದು ಲಕ್ಷ ರೂಪಾಯಿಗಳ ಕ್ರಿಟಿಕಲ್ ಇಲ್ನೆಸ್ ಕವರ್ ಅನ್ನು ಕೂಡ ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ.
  5. ಈಗಾಗಲೇ ನೀವು ಮೊದಲಿನಿಂದಲೂ ಕೂಡ ಎಚ್ ಡಿ ಎಫ್ ಸಿ ಬ್ಯಾಂಕಿನ ಖಾತೆದಾರರಾಗಿದ್ರೆ ನಿಮಗೆ ಲೋನ್ ಪಡೆಯುವ ಸಂದರ್ಭದಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡಲಾಗುತ್ತದೆ. ಇನ್ನು ಗ್ರಾಹಕರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕಾಗಿ ರಿಯಾಯಿತಿ ದರದ EMI ಅನ್ನು ಕೂಡ ಗ್ರಾಹಕರಿಗೆ ನೀಡುತ್ತದೆ.

HDFC Bank Personal Loan ಬಡ್ಡಿದರ ಹಾಗೂ ಇನ್ನಿತರ ಶುಲ್ಕಗಳು- Processing charges and Interest rates

HDFC Bank Personal Loan ಅನ್ನು ನೀವು ಪಡೆದುಕೊಂಡಲ್ಲಿ ಪರ್ಸನಲ್ ಲೋನ್ ಗೆ ಇರುವಂತಹ ಬಡ್ಡಿದರವನ್ನು ಲೆಕ್ಕಾಚಾರ ಮಾಡುವುದಾದರೆ ಇಲ್ಲಿ 10.50 ರಿಂದ 21% ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಬೇರೆ ಸಾಲುಗಳಿಗೆ ಹೋಲಿಸಿದರೆ ಪರ್ಸನಲ್ ಲೋನ್ ಮೇಲೆ ಇರುವಂತಹ ಬಡ್ಡಿದರ ಹೆಚ್ಚು ಎನ್ನುವುದನ್ನು ನೀವು ಈ ಮೂಲಕ ತಿಳಿಯಬಹುದಾಗಿದೆ. ಇನ್ನಿತರ ಶುಲ್ಕಗಳ ಬಗ್ಗೆ ಮಾತನಾಡುವುದಾದರೆ ಸಾಲದ ಪ್ರೊಸೆಸಿಂಗ್ ಫೀಸ್ ಅನ್ನು 2.50% ಅಂದರೆ ಹೆಚ್ಚೆಂದರೆ 25,000 ವರೆಗೂ ಕೂಡ ಪಡೆಯಬಹುದಾಗಿದೆ ಇದು ಸಾಲದ ಮೇಲೆ ನಿರ್ಧಾರವಾಗಿರುತ್ತದೆ. ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಅನ್ನು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ನೀಡಬೇಕಾಗುತ್ತದೆ.

HDFC Bank Personal Loan ಪಡೆಯಲು ಅನುಸರಿಸಬೇಕಾದ ವಿಧಾನಗಳು- Follow these steps to get Loan

  1. ಮೊದಲಿಗೆ ಐಡಿ ಪ್ರೂಫ್ ಗ್ರೂಪಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದರ ಜೆರಾಕ್ಸ್ ಕಾಪಿಯನ್ನು ನೀಡಬೇಕಾಗಿರುತ್ತದೆ.
  2. ಅಡ್ರೆಸ್ ಪ್ರೂಫ್ ಗ್ರೂಪಿನಲ್ಲಿ ಕೂಡ ಡ್ರೈವಿಂಗ್ ಲೈಸೆನ್ಸ್ ವೋಟರ್ ಐಡಿ ಆಧಾರ್ ಕಾರ್ಡ್ ಗಳಂತಹ ದಾಖಲೆಗಳನ್ನು ನೀಡಬೇಕಾಗಿರುತ್ತದೆ.
  3. ನಿಮ್ಮ ಆದಾಯದ ಪ್ರೂಫ್ ಅನ್ನು ನೀಡುವ ಕಾರಣಕ್ಕಾಗಿ ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಇಲ್ಲವೇ, ಕಳೆದ ಆರು ತಿಂಗಳ ಪಾಸ್ ಬುಕ್ ಡೀಟೇಲ್ಸ್ ಅನ್ನು ನೀಡಬೇಕಾಗಿರುತ್ತದೆ.
  4. ಈಗಿನ ಸಮಯಕ್ಕೆ ಸರಿಹೊಂದುವಂತೆ ಸ್ಯಾಲರಿ ಸರ್ಟಿಫಿಕೇಟ್ ಇಲ್ಲವೇ ಕಳೆದ ಎರಡು ಸ್ಯಾಲರಿ ಸ್ಲಿಪ್, ಫಾರ್ಮ್ 16 ಜೊತೆಗೆ ನೀಡಬೇಕಾಗಿರುತ್ತದೆ ಎನ್ನುವುದನ್ನು HDFC Bank Personal Loan ನಿಯಮಗಳು ಹೇಳುತ್ತವೆ. ಈ ಮೂಲಕ ನೀವು ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

Comments are closed.