RCB IPL 2023: ಮುಂಬೈ ವಿರುದ್ಧ ಲಕ್ನೋ ತಂಡ ಗೆದ್ದದ್ದು ಆರ್ಸಿಬಿಗೆ ಒಳ್ಳೆಯ ಸುದ್ದಿ- ಅದು ಹೇಗೆ ಗೊತ್ತೇ?? ಪ್ಲೇ ಆಫ್ ಲೆಕ್ಕಾಚಾರ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

RCB IPL 2023: ಐಪಿಎಲ್ (IPL) ಟೂರ್ನಿಯಲ್ಲಿ ಏನನ್ನು ಕೂಡ ಪ್ರಿಡಿಕ್ಟ್ ಮಾಡುವುದು ತುಂಬಾ ಕಷ್ಟ, ಅಂದುಕೊಂಡ ಹಾಗೆ ಇಲ್ಲಿ ಯಾವುದು ನಡೆಯುವುದಿಲ್ಲ. ಇದೀಗ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ವರ್ಸಸ್ ಲಕ್ನೌ ಸೂಪರ್ ಜೈನ್ಟ್ಸ್ (MI vs LSG) ಪಂದ್ಯದಲ್ಲಿ ಲಕ್ನೌ ತಂಡ ಗೆಲುವು ಸಾಧಿಸಿರುವುದು ಮುಂಬೈ ತಂಡಕ್ಕೆ ಹಿನ್ನಡೆ ಆಗಿದೆ. ಹಾಗೆಯೇ ಆರ್ಸಿಬಿ ತಂಡಕ್ಕೂ ಇದು ಫೈನಲ್ಸ್ ಹಾದಿ ಸುಗಮ ಆಗುವ ಹಾಗೆ ಮಾಡಿದೆ. ಅದು ಹೇಗೆ ಗೊತ್ತಾ?

lsg win helped rcb RCB IPL 2023:

ನಿನ್ನೆಯ ಪಂದ್ಯದಲ್ಲಿ ಗೆದ್ದ LSG ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ ತಂಡವು ಈ ಪಂದ್ಯ ಸೋತಿದ್ದು, ಇವರ ರನ್ ರೇಟ್ ಕೂಡ ಬಹಳ ಕಡಿಮೆ (-0.128) ಇದೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಮುಂಬೈ ಎಸ್.ಆರ್.ಹೆಚ್ ವಿರುದ್ಧ ಗೆದ್ದರು ಕೂಡ ಪ್ಲೇಆಫ್ಸ್ ತಲುಪುವ ಹಾದಿಯೇ ಕಷ್ಟಕರವಾಗಿದೆ. ಇತ್ತ ಸಿ.ಎಸ್.ಕೆ (CSK) ತಂಡ ಈಗ 15 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್ಸ್ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಮುಂದಿನ ಪಂದ್ಯಗಳನ್ನು ಸಿ.ಎಸ್.ಕೆ ಗೆದ್ದರೆ 2ನೇ ಸ್ಥಾನಕ್ಕೆ ತಲುಪಿ ಪ್ಲೇಆಫ್ಸ್ ಗೆ ಕ್ವಾಲಿಫೈ ಆಗುತ್ತದೆ. ಇದನ್ನು ಓದಿ..Kohli Bowling: ಬೌಲಿಂಗ್ ಮಾಡುವ ಆಲೋಚನೆ ಮಾಡಿದ್ದಾರಾ ಕೊಹ್ಲಿ?? ರಾಜಸ್ತಾನ ಪಂದ್ಯದ ಬಳಿಕ ಕಿಂಗ್ ಕೊಹ್ಲಿ ಹೇಳಿದ್ದೇನು ಗೊತ್ತೇ??

ಇನ್ನು ಆರ್ಸಿಬಿ (RCB) ತಂಡವು 12 ಪಂದ್ಯಗಳಿಂದ 12 ಅಂಕ ಪಡೆದಿದ್ದು, ಆರ್ಸಿಬಿ ರನ್ ರೇಟ್ ಕೂಡ ಚೆನ್ನಾಗಿದೆ, (+0.166) ಇದೆ. ಆರ್ಸಿಬಿ ತಂಡಕ್ಕೆ ಈಗ ಇನ್ನೆರಡು ಪಂದ್ಯಗಳು ಉಳಿದಿದ್ದು, ಎಸ್.ಆರ್.ಹೆಚ್ (RCB vs SRH) ವಿರುದ್ಧ ನಾಳೆ ಪಂದ್ಯ ನಡೆಯಲಿದ್ದು, ಮೇ 21ರಂದು ಗುಜರಾತ್ ಟೈಟನ್ಸ್ (RCB vs GT) ವಿರುದ್ಧ ಪಂದ್ಯವಿದೆ. ಈ ಎರಡರಲ್ಲೂ ಗೆದ್ದು, 16 ಅಂಕ ಗಳಿಸಿದರೆ, ಆರ್ಸಿಬಿ ಫೈನಲ್ಸ್ ತಲುಪುವ ಹಾದಿ ಬಹಳ ಸುಲಭ ಆಗುತ್ತದೆ.

ಆದರೆ ಒಂದು ವೇಳೆ ಒಂದು ಪಂದ್ಯ ಸೋತು, ಮತ್ತೊಂದು ಪಂದ್ಯದಲ್ಲಿ ಗೆದ್ದರು ಕೂಡ, ಆರ್ಸಿಬಿ ತಂಡ ಪ್ಲೇಆಫ್ಸ್ ಕನಸನ್ನು ಮರೆತುಬಿಡಬೇಕಿದೆ. ನಿನ್ನೆ ಮುಂಬೈ ತಂಡ ಸೋತಿರುವುದು ಆರ್ಸಿಬಿ ಪಾಲಿಗೆ ಹೊಸದೊಂದು ಅವಕಾಶ ನೀಡಿದ್ದು, ಇನ್ನೆರಡು ಪಂದ್ಯಗಳನ್ನು ಚೆನ್ನಾಗಿ ಆಡಿ, ಒಳ್ಳೆಯ ಅಂತರದಲ್ಲಿ ಗೆದ್ದರೆ, ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಬಹುದು. ಆರ್ಸಿಬಿ ಆಟಗಾರರ ಪ್ರದರ್ಶನ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.https://bbctimenews.com/2023/05/16/money-savings-tips-in-kannada-2/

Comments are closed.