Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Top Selling SUV: ಇತ್ತೀಚಿನ ವರ್ಷಗಳಲ್ಲಿ SUV ಗಳು ಜಾಸ್ತಿ ಮಾರಾಟ ಆಗುತ್ತಿದೆ. ಬೇರೆ ಕಾರ್ ಗಿಂತ SUV ಬಹಳ ಎತ್ತರವಾಗಿರುತ್ತದೆ ಜೊತೆಗೆ ವಿಶಾಲವಾಗಿಯು ಇರುತ್ತದೆ. ಇದೇ ಕಾರಣಕ್ಕೆ ಹೆಚ್ಚು ಮಾರಾಟ ಆಗುತ್ತದೆ. ಹಾಗೆಯೇ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಸಹ ಇದೆ. 2023 ಜೂನ್ ತಿಂಗಳ ಅಂಕಿ ಅಂಶವನ್ನು ಮಾರಾಟ ಆಗಿರುವ SUV ಗಳನ್ನು ನೋಡಿದರೆ, ಅತಿಹೆಚ್ಚು ಮಾರಾಟ ಆಗಿರುವುದು ಹುಂಡೈ ಕ್ರೆಟಾ. Tata Nexon, Brezza, Punch ಈ ಎಲ್ಲಾ ಕಾರ್ ಗಿಂತ ಹೆಚ್ಚು ಮಾರಾಟ ಆಗಿದೆ (Top Selling SUV)..

2023ರ ಜೂನ್ ನಲ್ಲಿ ಬರೋಬ್ಬರಿ 14,447 ಯೂನಿಟ್ ಗಳಷ್ಟು ಕ್ರೆಟಾ ಕಾರ್ ಮಾರಾಟ ಆಗಿದ್ದು, ಬೇರೆ ಎಲ್ಲಾ SUV ಗಳ ಸೇಲ್ಸ್ ಅನ್ನು ಹಿಂದಕ್ಕೆ ಹಾಕಿದೆ. ಬೇರೆ ಕಾರ್ ಗಳಾದ ಟಾಟಾ ನೆಕ್ಸಾನ್ 13,827 ಯುನಿಟ್ಸ್, ಹುಂಡೈ ವೆನ್ಯೂ 11,606 ಯುನಿಟ್ಸ್, ಟಾಟಾ ಪಂಚ್ 10,990 ಯುನಿಟ್ಸ್ ಮಾರಾಟ ಆಗಿದೆ (Top Selling SUV). ಮಾರುತಿ ಸಂಸ್ಥೆಯ ಬ್ರೆಜಾ ಕಾರ್ 10,578 ಯುನಿಟ್ಸ್ ಮಾರಾಟ ಆಗಿದೆ. ಇದನ್ನು ಗಮನಿಸಿದರೆ ಟಾಪ್ 5 SUV ಗಳ ಪೈಕಿ 2 ಟಾಟಾ, 2 ಹುಂಡೈ ಮತ್ತು ಬ್ರೆಜಾ ಸೇರಿದೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

ಹುಂಡೈ ಕ್ರೆಟಾ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಹುಂಡೈ ಕ್ರೆಟಾದ ಬೆಲೆ ₹10.87 ಲಕ್ಷದಿಂದ ಶುರುವಾಗಿ ₹19.20 ಲಕ್ಷದವರೆಗು ಇರುತ್ತದೆ. ಇದು 5 ಸೀಟರ್ ಕಾರ್ ಆಗಿದೆ. ಈ SUV ನಲ್ಲಿ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ 115ps/144nm ಹಾಗೂ 1.5ಲೀಟರ್ ಡೀಸೆಲ್ 116ps/250nm ಆಯ್ಕೆ ಹೊಂದಿದೆ. ಈ SUV ನಲ್ಲಿ 6 ಸ್ಪೀಡ್ ಮ್ಯಾನುವಲ್ ಇಂಟಲಿಜೆನ್ಟ್ ವೇರಿಯಬಲ್ ಟ್ರಾನ್ಸ್ಮಿಷನ್ (IVT) ಮತ್ತು 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿರುತ್ತದೆ (Top Selling SUV).

ಇನ್ನಿತರ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಪನೋರಮಿಕ್ ಸನ್ ರೂಫ್, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25ಇಂಚ್ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನೆಕ್ಟೆಡ್ ಕಾರ್ ಟೆಕ್ನಾಲಜಿ, ವೆಂಟಿಲೇಟೆಡ್ ಫ್ರಂಟ್ ಸೀಟು, ವೈರ್‌ ಲೆಸ್ ಚಾರ್ಜಿಂಗ್, LED ಹೆಡ್‌ ಲ್ಯಾಂಪ್ ಮತ್ತು LED ಟೈಲ್‌ ಲ್ಯಾಂಪ್‌ ಇರುತ್ತದೆ (Top Selling SUV). ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

ಇನ್ನು ಸುರಕ್ಷತೆಯ ಬಗ್ಗೆ ಹೇಳುವುದಾದರೆ, 6 ಏರ್‌ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (VSM), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಆಲ್ ವೀಲ್ ಡಿಸ್ಕ್ ಬ್ರೇಕ್‌, ISOFIX ಚೈಲ್ಡ್ ಸೀಟ್ ಆಂಕರ್‌, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ EBD ಪಾರ್ಕಿಂಗ್ ವೈಶಿಷ್ಟ್ಯತೆ ಕ್ಯಾಮರಾ ಮತ್ತು ABS ಸಿಸ್ಟಮ್ ಅನ್ನು ಒಳಗೊಂಡಿದೆ (Top Selling SUV). ಇದನ್ನು ಓದಿ..Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?

Comments are closed.